ಬೆಳಗಾವಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬ ತನ್ನ ಚಿಕ್ಕಪ್ಪನ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಯಳ್ಳೂರು ಗ್ರಾಮದ ವಿಕ್ಕಿ ಪಾಟೀಲ (24) ತನ್ನ ಚಿಕ್ಕಪ್ಪ ರಾಜು ಮಲ್ಲಪ್ಪ ಪಾಟೀಲ (50) ಎಂಬುವರನ್ನು ಕೊಲೆ ಮಾಡಿ ಶವವನ್ನು ವಡಗಾವಿಯ ಸ್ಮಶಾನದಲ್ಲಿ ಇಟ್ಟು ರುಂಡವನ್ನು ತನ್ನ ಆಟೋದಲ್ಲಿ ತೆಗೆದುಕೊಂಡು ನೇರವಾಗಿ ಶಹಾಪುರ ಠಾಣೆಗೆ ಬಂದು ಶರಣಾಗಿದ್ದಾನೆ. ಹಲವಾರು ವರ್ಷಗಳಿಂದ ಎರಡೂ ಕುಟುಂಬಗಳ ಮಧ್ಯೆ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಬುಧವಾರವೂ ಮಾತಿಗೆ ಮಾತು ಬೆಳೆದು ಸಂಯಮ ಕಳೆದುಕೊಂಡ ವಿಕ್ಕಿ ಪಾಟೀಲ ಹರಿತವಾದ ಆಯುಧದಿಂದ ತನ್ನ ಚಿಕ್ಕಪ್ಪ ರಾಜು ಮಲ್ಲಪ್ಪ ಪಾಟೀಲನ ಕತ್ತನ್ನು ಕತ್ತರಿಸಿದ್ದಾನೆ. ಶಹಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ, ಆಟೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.