ಹುಮನಾಬಾದ್: ನಾಗರ ಪಂಚಮಿ ನಿಮಿತ್ತ ಹಲವೆಡೆ ಅಪಾರ ಸಂಖ್ಯೆಯ ಭಕ್ತ ಸಮೂಹ ದೇವರಿಗೆ ನೈವೇದ್ಯ, ಜೋಳದ ಅಳ್ಳು ಮತ್ತಿತರ ಪದಾರ್ಥಗಳನ್ನು ಸಲ್ಲಿಸುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು.
ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಸೀಮಿ ನಾಗನಾಥ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆ ಭಕ್ತ ಸಮೂಹ ಸಾಲಲ್ಲಿ ನಿಂತು ದೇವರ ದರ್ಶನ ಪಡೆದು ದೇವರಿಗೆ ನೈವೇದ್ಯ ಅರ್ಪಿಸುತ್ತಿರುವುದು ಕಂಡು ಬಂದಿತು.
ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳ ಹಾಗೂ ಆಂಧ್ರ, ಮಹಾರಾಷ್ಟ್ರ ಗಡಿಭಾಗದ ಭಕ್ತರು ಸಹ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಶಾಸಕ ರಾಜಶೇಖರ ಪಾಟೀಲ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ,ದೇವರ ಆಶೀರ್ವಾದ ಪಡೆದು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್ಐ ಶರಣಬಸಪ್ಪ ಕೊಡ್ಲಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು, ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡುವಲ್ಲಿ ನೆರವಾದರು. ಚಿಟಗುಪ್ಪ, ಮನ್ನಾಏಖೇಳಿ, ಹಳ್ಳಿಖೇಡ(ಕೆ), ಬೇಮಳಖೇಡ ಸೇರಿದಂತೆ ಹಲವೆಡೆ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.