ಸಿಂದಗಿ: ಶಿವಶರಣ ಮಾದಾರ ಚನ್ನಯ್ಯನವರ ತತ್ವಗಳು ಇಂದಿಗೂ ಆದರ್ಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸೋಮವಾರ ರಾತ್ರಿ ಪಟ್ಟಣದ ಡಾ. ಬಾಬು ಜಗಜೀವನರಾಮ್ ಉದ್ಯಾನವನದಲ್ಲಿ ಮಹಾಶಿವಶರಣ ಮಾದಾರ ಚನ್ನಯ್ಯ ಯುವಕ ಸಂಘ ಹಮ್ಮಿಕೊಂಡ ಮಾದಾರ ಚನ್ನಯ್ಯನವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ದಲಿತರ ಉದ್ಧಾರಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಿಂದಗಿಯಲ್ಲಿ ಅಂಬೇಡ್ಕರ್ ಭವನಕ್ಕಾಗಿ ರು. 1.35 ಕೋಟಿ ಮಂಜೂರು ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಡಾ. ಬಾಬು ಜಗಜೀವನರಾಮ ಭವನಕ್ಕಾಗಿ ರು. 1 ಕೋಟಿ ಬಿಡುಗಡೆ ಮಾಡಿದೆ. ದಲಿತರ ಜಮೀನಿಗೆ ಉಚಿತ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ನ ಹಿರಿಯ ಮುಖಂಡ ಎನ್.ಎಸ್. ಹಿರೇಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶರಣಪ್ಪ ಸುಣಗಾರ, ಕೆಜೆಪಿ ಮುಖಂಡ ಯಶವಂತ್ರಾಯಗೌಡ ರೂಗಿ, ನಿವೃತ್ತ ಪ್ರಾಧ್ಯಾಪಕ ಎಂ.ಎಸ್. ಹೈಯಾಳಕರ, ಸ್ಲಂ ಜನಾಂದೋಲನ ಸಮಿತಿ ಅಧ್ಯಕ್ಷ ಎನ್. ನರಸಿಂಹಮೂರ್ತಿ ಅವರು ಮಾದಾರ ಚನ್ನಯ್ಯನವರ ವಚನಗಳ ಕುರಿತು ವಿವರಿಸಿದರು.
ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠಲ ಕೊಳ್ಳೂರ, ತಹಸೀಲ್ದಾರ ಡಾ. ಶಂಕ್ರಣ್ಣ ವಣಕಿಹಾಳ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಣ್ಣ ಹಿರೇಕುರುಬರ, ಕಾಂಗ್ರೆಸ್ ಮುಖಂಡ ಎಂ.ಎ. ಖತೀಬ, ಭೀಮಾ ಕಲಾಲ, ಮಲ್ಲೇಶಿ ಕೆರೂರ, ದಸ್ತಗೀರ ಇಂಗಳಗಿ, ಡಿಎಸ್ಎಸ್ ಸಂಚಾಲಕ ಅಶೋಕ ಸುಲ್ಪಿ, ಕಾಸಪ್ಪ ಮಾದರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗುಲ್ಬರ್ಗಾದ ಸಿದ್ದಬಸವಕಬೀರ ಶ್ರೀ, ಆಸಂಗಿಹಾಳದ ಶಂಕರಾನಂದ ಮಹಾರಾಜರು ಆಶೀರ್ವಚನ ನೀಡಿದರು. ರಾಜು ಮಾದರ ಪ್ರಾಸ್ತಾವಿಕ ಮಾತನಾಡಿದರು. ಸಾಯಬಣ್ಣ ದೇವರಮನಿ ಸ್ವಾಗತಿಸಿದರು. ಶಿಕ್ಷಕ ಎಸ್.ಬಿ.ಚೌಧರಿ ನಿರೂಪಿಸಿದರು. ಸಾಯಬಣ್ಣ ಪುರದಾಳ ವಂದಿಸಿದರು. ಮಾದಾರ ಚನ್ನಯ್ಯ ಯುವಕ ಸಂಘದ ಅಧ್ಯಕ್ಷ ಪರಸು ಹೊಸಮನಿ, ಯಲ್ಲು ಇಂಗಳಗಿ, ಖಾಜು ಸಂಕನಾಳ, ಪ್ರಕಾಶ ವಗ್ಗರ, ಬಸು ಕಡಿಮನಿ, ಪ್ರಧಾನಿ ಮೂಲಿಮನಿ ಕಾರ್ಯಕ್ರಮ ಸಂಘಟಿಸಿದ್ದರು.