ಬಿಜಾಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಸ್ಥಳಾಂತರಗೊಂಡ ಶಂಭೇವಾಡ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಅರ್ಪಿಸಿದ್ದಾರೆ.
ಶಂಭೇವಾಡ ಗ್ರಾಮ ಸ್ಥಳಾಂತರಗೊಂಡು 6 ತಿಂಗಳು ಕಳೆದರೂ ಇಲ್ಲಿನ ಜನರು ಕುಡಿಯಲು ನೀರು, ಸರಿಯಾದ ರಸ್ತೆ, ಶೌಚಾಲಯಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಇನ್ನು 200 ಕುಟುಂಬಗಳು ವಾಸಿಸಲು ಸೂರಿಲ್ಲದೆ ಬೀದಿಯಲ್ಲಿ ಜೀವನ ನಡೆಸುವಂತಾಗಿದೆ. ಇಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣ ಕಳಪೆಯಿಂದ ಕೂಡಿದ್ದು, ಇದರ ಬಗ್ಗೆ ತನಿಖೆ ನಡೆಸಬೇಕು. ಕೂಡಲೇ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಜಿ. ಸಿದ್ದಪ್ಪ ಅವರು ಮನವಿ ಸ್ವೀಕರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ಎಂ.ಸಿ. ಮುಲ್ಲಾ, ಯಶವಂತರಾಯಗೌಡ ರೂಗಿ, ಭೀಮರಾಯ ಔರಾದಿ, ಮಹಾಂತೇಶ ಪರಗೊಂಡ, ಶಂಕರಗೌಡ ಪಾಟೀಲ, ಭೀಮರಾಯಗೌಡ ಪಾಟೀಲ, ರಮೇಶ ಜಮಾದಾರ, ಸುರೇಶ ಪೂಜಾರಿ, ರಾಜು ಮದರಖಾನಿ, ಪೀರಪ್ಪ ಅಂಗಡಿ, ಶಿವಯೋಗೇಪ್ಪ ಪೂಜಾರಿ, ಪ್ರಕಾಶ ಕುಂಬಾರ, ದಸ್ತಗೀರ ಸಾಲೋಟಗಿ, ಮಹಾದೇವ ರವಜಿ, ಮೃತ್ಯುಂಜಯ ಹಿರೇಮಠ, ಮಂಜುಳಾ, ಮಹಮ್ಮದ ಸಿರಗೂರ, ದಾದಾಪೀರ ಬಡಕಲ್, ಅಶೋಕ ಪಾಟೀಲ, ಸುನೀಲ ಖತ್ರಿ ಇದ್ದರು.