ತಾಳಿಕೋಟೆ: ಪಟ್ಟಣದ ಭಗೀರಥ ಉಪ್ಪಾರ ಸಮಾಜದ ವತಿಯಿಂದ ಪಟ್ಟಣದಲ್ಲಿ ಮಹರ್ಷಿ ಭಗೀರಥ ಉಪ್ಪಾರ ಸಮಾಜದ ಬೃಹತ್ ಸಮಾವೇಶ ಹಾಗೂ ಜಗದ್ಗುರು ಪುರುಷೋತ್ತಮಾನಂದ ಪುರಿಗಳ ಅಂಬಾರಿಯ ಮೇಲೆ ಮೆರವಣಿಗೆ ಜ. 27ರಂದು ಹಮ್ಮಿಕೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ವೆಂಕಟೇಶ್ವರ ಗುಡಿಯಿಂದ ಶರಣಮುತ್ಯಾ ದೇವಸ್ಥಾನದವರೆಗೆ ಮದುರೈ ಭಗೀರಥ ಪೀಠದ ಜಗದ್ಗುರು ಪುರುಷೋತ್ತಮಾನಂದ ಪುರಿಗಳನ್ನು ಆನೆಯ ಅಂಬಾರಿಯ ಮೇಲೆ, ಚಿಕ್ಕಲಗಿಮಠದ ಶಿವಾನಂದ ಮಹಾಸ್ವಾಮಿಗಳನ್ನು ರಥದಲ್ಲಿ ಮೆರವಣಿಗೆಯಲ್ಲಿ ಕರೆತರಲಾಗುವುದು. ಮಧ್ಯಾಹ್ನ ಸಮಾವೇಶ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಉದ್ಘಾಟಿಸುವರು. ಖಾಸ್ಗತೇಶ್ವರ ಮಠದ ವೀರಕ್ತ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಡಾ. ಎಸ್.ವಿ. ಬಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಗೋವಿಂದ ಕಾರಜೋಳ ಭಗೀರಥ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಸಚಿವ ರಾಜುಗೌಡ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ಶಾಸಕರಾದ ಸಿ.ಎಸ್. ನೌಡಗೌಡ, ಎ.ಎಸ್. ಪಾಟೀಲ ನಡಹಳ್ಳಿ, ಎಮ್.ಬಿ. ಪಾಟೀಲ, ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಡಾ. ಸಾರ್ವಬೌಮ ಬಗಲಿ, ವಿಧಾನ ಪರಿಷತ್ ಸದಸ್ಯ ಎಚ್.ಸಿ. ನೀರಾವರಿ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದು ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಮಲಕಣ್ಣ ಮಸರಕಲ, ಸುಭಾಷ ಯರಕಿಹಾಳ ತಿಳಿಸಿದ್ದಾರೆ.