ಜಾನಪದ ಕಲೆ ಉಳಿಸಿ ಬೆಳೆಸಿ: ಪಾಟೀಲ

Updated on: 

ಬಸವನಬಾಗೇವಾಡಿ: ಗ್ರಾಮೀಣ ಭಾಗದ ಜೀವಂತಿಕೆ ಪ್ರತಿಬಿಂಬಿಸುವ ಜಾನಪದ ಕಲೆಗಳ ಉಳಿವಿಗೆ ಹೆಚ್ಚಿನ ಪ್ರಯತ್ನ ನೀಡಲು ಇಂದಿನ ಯುವಜನತೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಶೇಖರಗೌಡ ಪಾಟೀಲ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಗುರುವಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕು ಆಡಳಿ, ತಾಲೂಕು ಯುವಸಂಘಗಳ ಒಕ್ಕೂಟ ಹಾಗೂ ಓಂ ಶ್ರೀ ಗ್ರಾಮೀಣಾಭಿವೃದ್ಧಿ ಯುವಕ ಮಂಡಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿಜಾಪುರ ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ನಶಿಸಿಹೋಗುತ್ತಿರುವುದು ವಿಷಾದದ ಸಂಗತಿ. ಅಂತಹ ಕಲೆಗಳನ್ನು ಉಳಿಸಿ- ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಪಾತ್ರ ಮುಖ್ಯ ಎಂದರು.  ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಾವೀದ ಜಮಾದಾರ ಅವರು ಮಾತನಾಡಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಮ್ಮ ದೇಶದ ಸಂಸ್ಕೃತಿಯನ್ನು ರಾಷ್ಟ್ರೀಯ ಕುರುಹುಗಳಾಗಿ ಸ್ವೀಕರಿಸಿ, ವಿಶೇಷ ನೀತಿ ಜಾರಿಗೆ ತರಬೇಕಾದ ಅಗತ್ಯವಿದೆ ಎಂದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿದರು. ವಿರಕ್ತ ಮಠದ ಸಿದ್ದಲಿಂಗದೇವರು, ಇಟಗಿ ಗುರುಶಾಂತವೀರ ದೇವರು ಸಾನ್ನಿಧ್ಯ ವಹಿಸಿದ್ದರು.
ಜಿಪಂ ಅಧ್ಯಕ್ಷೆ ಕಾವ್ಯಾ ದೇಸಾಯಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಓಲೇಕಾರ, ತಹಸೀಲ್ದಾರ ಎಂ.ಬಿ. ನಾಗಠಾಣ, ಸಾಹಿತಿ ಲ.ರು. ಗೊಳಸಂಗಿ, ಅಡಿವೆಪ್ಪ ಸಾಲಗಲ್ಲ, ಸಂಜೀವ ಕೋತ, ರಾಜು ಚಿಕ್ಕೊಂಡ, ರಮಜಾನ ಮುಜಾವರ, ಅರವಿಂದ ಸಾಲವಾಡಗಿ, ಬಿ.ಪಿ. ಹಿರೇಮಠ, ಎಸ್.ಕೆ. ಸೋಮನಕಟ್ಟಿ, ಡಾ, ಅಮರೇಶ ಮಿಣಜಗಿ, ಪುಂಡಲೀಕ ಮುರಾಳ ಇತರರು ಇದ್ದರು. ಪುರಸಭೆ ಮುಖ್ಯಾಧಿಕಾರಿ ಅರವಿಂದ ಜಮಖಂಡಿ ಪ್ರಾಸ್ತಾವಿಕ ಮಾತನಾಡಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ  ಅಧಿಕಾರಿ ಆರ್.ಬಿ. ಉಪಾಸೆ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು. ಟಿ.ಎ. ತಳಕೇರ ವಂದಿಸಿದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಜರುಗಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com