ಬಿಜಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಗರದಲ್ಲಿ ಫೆ. 9,10,11ರಂದು ನಡೆಯಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿ ನೀಡುವ ವೆಬ್ಸೈಟ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ಲ್ಯಾಪ್ಟ್ಯಾಪ್ ಗುಂಡಿ ಒತ್ತುವ ಮೂಲಕ ಶನಿವಾರ ಚಾಲನೆ ನೀಡಿದರು. ಮಾಹಿತಿ ಸೂಚನಾ ಕೇಂದ್ರದ ಅಧಿಕಾರಿ ಹಾಗೂ ವಿಜ್ಞಾನಿ ಶಿವಾನಂದ ಗೂಗವಾಡ ಅವರು ವಿನ್ಯಾಸಗೊಳಿಸಿದ http.www. bijapur.nic.in.79kansam ಮತ್ತು ವರ್ಲ್ಡ್ ನ್ಯೂಸ್ನ ಬಾಲಚಂದ್ರ ಪಿ.ವಿ. ಅವರು ತಯಾರಿಸಿದ www.liveNext.inಸಮ್ಮೇಳನದ ವೆಬ್ಸೈಟ್ಗೆ ಚಾಲನೆ ನೀಡಲಾಯಿತು.