ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಗ್ರಾಮದಲ್ಲಿ ಅಜ್ಜಿಯ ಶವ ಸಂಸ್ಕಾರಕ್ಕೆ ಹೋಗಿದ್ದ ಮೊಮ್ಮಗಳು ಸಹ ನಿಧನ ಹೊಂದಿದ ಘಟನೆ ಮನಗೂಳಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಶತಾಯುಷಿ ಮಡಿವಾಳವ್ವ ಶಿವಯ್ಯ ಹಿರೇಮಠ (102) ಶನಿವಾರ ನಿಧನ ಹೊಂದಿದ್ದರು. ಭಾನುವಾರ ಅಂತ್ಯಸಂಸ್ಕಾರ ಇತ್ತು. ಅದೇ ಗ್ರಾಮದಲ್ಲಿದ್ದ ಮೊಮ್ಮಗಳು (ಮಗನ ಮಗಳು) ಬಸಮ್ಮ ಬಸಯ್ಯ ನಂದಿಕೋಲಮಠ (45) ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಬಿಜಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದಳು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Advertisement