ಚಡಚಣ: ಸಾಲಬಾಧೆಯಿಂದ ಬೇಸತ್ತು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹತ್ತಳ್ಳಿ ಗ್ರಾಮದ ಮತ್ತೊಬ್ಬ ರೈತನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಜರುಗಿದೆ.
ಜಕ್ಕಪ್ಪ ಶಿವಪ್ಪ ಹೇರಕಾರ (38) ಆತ್ಮಹತ್ಯೆಗೆ ಶರಣಾದಾತ. 2 ತಿಂಗಳ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದ ಮೂರೂವರೆ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಬೆಳೆ ಸಂಪೂರ್ಣ ನಾಶವಾಗಿತ್ತು. ಹೀಗಾಗಿ ಚಡಚಣ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಬೆಳೆಸಾಲ ಹಾಗೂ ಪೈಪ್‌ಲೈನ್‌ಗಾಗಿ ರು. 3 ಲಕ್ಷ, ಹತ್ತಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರು. 42 ಸಾವಿರ, ಕೈಗಡವಾಗಿ ಖಾಸಗಿಯವರಲ್ಲಿ ರು. 7 ಲಕ್ಷ ಸಾಲ ಮಾಡಿದ್ದ. ಹಾವಿನಾಳ ಗ್ರಾಮದ ಇಂಡಿಯನ್ ಶುಗರ್ಸ್‌ಗೆ ಸಾಗಿಸಿದ್ದ ಕಬ್ಬಿನ ಬಾಕಿ ಹಣ ಈವರೆಗೂ ಪಾವತಿಯಾಗಿರಲಿಲ್ಲ. ಇದರಿಂದ ನೊಂದು ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
Advertisement