ಚಾಮರಾಜನಗರ: ನಗರಸಭಾ ಸದಸ್ಯರಾಗಿದ್ದ ಜೆಡಿಎಸ್ ಮತ್ತು ವಾಟಾಳ್ ಪಕ್ಷದ ಐವರು ಸದಸ್ಯರು ಸೇರಿದಂತೆ ಹಲವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಟೌನ್ ಘಟಕದ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯರಾದ ಸುದರ್ಶನ್ ಗೌಡ, ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್. ಸುರೇಶ್ ನಾಯಕ್, ಸದಸ್ಯ ನಾಗರಾಜು ಮತ್ತು ವಾಟಾಳ್ ಪಕ್ಷದ ಸದಸ್ಯರಾದ ಪ್ರಭಾ, ಲಿಂಗರಾಜು ಹಾಗೂ ಹಿಂದಿನ ನಗರಸಭೆಗೆ ಪಕ್ಷೇತರರಾಗಿ ಆಯ್ಕೆಯಾಗಿದ್ದ ಪಿ. ಚಿನ್ನಸಾಮಿ , ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ಚೂಡಾ ಮಾಜಿ ಅಧ್ಯಕ್ಷ ಸಯ್ಯದ್ ಇರ್ಷಾದ್ ಉಲ್ಲಾ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಂದೀಶ್, ಜೆಡಿಎಸ್ ಟೌನ್ ಉಪಾಧ್ಯಕ್ಷ ಚಿಕ್ಕರಾಜು, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಂದ್ರಸ್ವಾಮಿ, ವಾಟಾಳ್ ಪಕ್ಷದ ಮುಖಂಡರಾದ ರೇಣುಕಾ, ಪುರಸಭಾ ಮಾಜಿ ಉಪಾಧ್ಯಕ್ಷ ಗುರುಬಸವಣ್ಣ, ಸವಿತಾ ಸಮಾಜದ ಮುಖಂಡ ಮಹೇಶ್, ಚೇತನ್ ನಾಯ್ಕ, ಸಿ.ಬಿ.ಬಂಗಾರು, ಮಹದೇವಶೆಟ್ಟಿ, ಗೋವಿಂದನಾಯ್ಕ, ಲೋಕೇಶ್.ಎಂ., ನಾಗನಾಯ್ಕ, ಮಹೇಶ್, ವಾಸು, ನಾರಾಯಣ, ಸೋಮು, ಕೃಷ್ಣ, ಸಿ.ಎನ್.ವೆಂಕಟರಾಜು, ಕೃಷ್ಣನಾಯಕ್ ಮತ್ತಿತರರು ಕಾಂಗ್ರೆಸ್ಗೆ ಸೇರ್ಪಡೆಯಾದರು.
ವಿವಿಧ ಪಕ್ಷಗಳ ಮುಖಂಡರುಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಕಾಂಗ್ರೆಸ್ ಉತ್ತಮ ಪಕ್ಷ, ತಾಯಿಯಂತೆ ಪ್ರೀತಿಸಿ ಎಂದರು.
ಜಿಪಂನಲ್ಲಿ 15 ಸ್ಥಾನ, ಜಿಲ್ಲೆಯ 4 ತಾಪಂನಲ್ಲಿ ಗೆಲವು ಸಾಧಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನಗರಸಭಾ ಚುನಾವಣೆಯಲ್ಲೂ ಗೆಲುವನ್ನು ಸಾಧಿಸಬೇಕು ಎಂದು ತಿಳಿಸಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಉತ್ತಮ ಆಡಳಿತವನ್ನು ಕಾಂಗ್ರೆಸ್ ನಿರ್ವಹಿಸಬಲ್ಲದು ಎಂದು ಭರವಸೆ ನೀಡಿದರು.
ಗೆಲವಿಗೆ ಶ್ರಮವಹಿಸಿ: ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಆಗಮಿಸಿದ ಎಲ್ಲರನ್ನೂ ಅಭಿನಂದಿಸಿದ ಅವರು, ಪಕ್ಷದಲ್ಲಿ ಯಾವುದೇ ಭೇದಭಾವಗಳಿಲ್ಲದೇ, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಮುಂಬರುವ ನಗರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮವಹಿಸಿ ದುಡಿಯಬೇಕು ಎಂದು ತಿಳಿಸಿದರು.
ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಹದೇವಪ್ರಸಾದ್ ಮಾತನಾಡಿ, ನಗರಸಭಾ ಮಾಜಿ ಸದಸ್ಯರು, ಜೆಡಿಎಸ್ ಮತ್ತು ವಾಟಾಳ್ ಪಕ್ಷದ ಕಾರ್ಯಕರ್ತರು, ಪಕ್ಷದ ನೀತಿ ನಿಬಂಧನೆಗಳಿಗೆ ಒಪ್ಪಿ ತತ್ವ ಸಿದ್ಧಾಂತಗಳನ್ನು ಪಾಲಿಸಿ ಪಕ್ಷವನ್ನು ಬಲಪಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಶಾಸಕ ನರೇಂದ್ರ, ಮಾಜಿ ಶಾಸಕ ಸಿ.ಗುರುಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಸೈಯದ್ ರಫೀ, ಎಚ್.ವಿ.ಚಂದ್ರು, ಮಾಂಬಳ್ಳಿ ನಂಜುಂಡಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕೆರಹಳ್ಳಿ ನವೀನ್, ಜಿ.ಪಂ. ಮಾಜಿ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಶಿವಕುಮಾರ್, ಮಾರ್ಕೆಟ್ ಗಿರೀಶ್, ಕೋಡಿಮೋಳೆ ರಾಜಶೇಖರ್, ಎಲ್. ಸುರೇಶ್, ಸೇವಾದಳದ ಜಿಲ್ಲಾಧ್ಯಕ್ಷ ರವಿಗೌಡ, ಮೂರ್ತಿ ಇದ್ದರು.
ಕಾಂಗ್ರೆಸ್ ಗೆಲ್ಲಿಸಿ: ಮಹದೇವಪ್ರಸಾದ್
ಚಾಮರಾಜನಗರ: ಮುಂಬರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕೆಂದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಎಚ್.ಎಸ್.ಮಹದೇವ ಪ್ರಸಾದ್ ಅವರು ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನಿಂದಲೇ ಪಕ್ಷದ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತಿದ್ದು ಅಭ್ಯರ್ಥಿಗಳಾಗಬಯಸುವವರು ಅರ್ಜಿ ಸಲ್ಲಿಸಬಹುದು ಎಂದರು.
ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ನರೇಂದ್ರ, ಮಾಜಿ ಶಾಸಕರಾದ ಜಯಣ್ಣ, ಸಿ.ಗುರುಸ್ವಾಮಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಪಿ.ಪುಟ್ಟಬುದ್ಧಿ, ಕುಮಾರಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ಕೆ.ರವಿಕುಮಾರ್, ಸೈಯ್ಯದ್ರ್ಫಿ, ಹೂಂಗನೂರು ಚದ್ರು, ಕಾಮರಾಜ್, ತೋಟೇಶ್, ಜಿಲ್ಲಾ ಎಸ್.ಸಿ ವಿಭಾಗದ ಅಧ್ಯಕ್ಷ ಶಿವಕುಮಾರ್, ಶ್ರೀನಿವಾಸನಾಯ್ಕ, ಎಚ್.ಎಸ್.ಬಸವರಾಜು, ಸುಹೇತ್, ಮಾಂಬಳ್ಳಿ ನಂಜುಂಡಸ್ವಾಮಿ, ಕೆ.ಸಿ.ಸಿ.ಸಿ ಸದಸ್ಯರಾದ ಸ್ವಾಮಿ, ನಾಜಿಮುದ್ದೀನ್, ಮುನಿರಾಜು, ಕಬ್ಬಳ್ಳಿ ಮಹೇಶ್ ಇತರರಿದ್ದರು.