ಹಾಲಿನ ಡೇರಿ ಅಭಿವೃದ್ಧಿಗೆ ನೆರವು

Updated on: 

ಚಾಮರಾಜನಗರ: ಹೈನುಗಾರಿಕೆಯನ್ನು ಪ್ರಧಾನ ಕಸುಬನ್ನಾಗಿ ಮಾಡಿಕೊಂಡು ಅರ್ಥಿಕ ಪ್ರಗತಿ ಸಾಧಿಸಲು ರೈತರು ಮುಂದಾಗಬೇಕು. ಇದಕ್ಕಾಗಿ  ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಸಂಸ್ಥೆಯ ಹೈನುಗಾರಿಕೆ ಅಧಿಕಾರಿ ಆಶೋಕ್ ತಿಳಿಸಿದರು.
ತಾಲೂಕಿನ ಮಲೆಯೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಕಟ್ಟಡ ಹೊಂದಲು ಹಾಗೂ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ರು. 50 ಸಾವಿರ ಚೆಕ್ ಅನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಾಶ್ರಿತ ಬೇಸಾಯ ಮಾಡುವ ರೈತರು ಹೆಚ್ಚಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಇದರೊಟ್ಟಿಗೆ ಹಸು ಸಾಕಾಣಿಕೆ ಮಾಡಿ ಹಾಲುನ್ನು ಡೇರಿಗೆ ಹಾಕುವ ಮೂಲಕ  ಸಂಪಾದನೆಯ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಗ್ರಾಮದಲ್ಲಿರುವ ಡೇರಿಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಗ್ರಾಮವನ್ನು ಪ್ರಗತಿಯತ್ತ ಕೊಂಡೋಯ್ಯುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ ಎಂದರು. ಡೇರಿ ಅಧ್ಯಕ್ಷ ಎಂ.ಎಸ್. ರವಿಶಂಕರ್ ಚೆಕ್ ಸ್ವೀಕರಿಸಿದರು.
ನಿವೃತ್ತ ವಿಸ್ತರಣಾಧಿಕಾರಿ ಸದಾಶಿವಯ್ಯ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡೇರಿ ಉಪಾಧ್ಯಕ್ಷ ಬಸವಣ್ಣ, ನಿರ್ದೇಶಕರಾದ ವಿಜಯಕುಮಾರ್, ನಾಗರಾಜು, ಪರಶಿವ, ಮಾದಶೆಟ್ಟಿ, ನಿಂಗನಾಯಕ, ನಾಗಯ್ಯ, ಬಸವಶೆಟ್ಟಿ, ರಾಜಮ್ಮ, ನೀಲಮ್ಮ, ಕಾರ್ಯನಿರ್ವಾಹಕ ಮಹದೇವಪ್ಪ, ಸಹಾಯಕ  ಶಿವಕುಮಾರ್, ಮಹದೇಶ್, ಪಿಎಸಿಸಿ ಬ್ಯಾಂಕ್ ಎಲ್. ಶಿವಪ್ಪ,  ಸಂಘದ ಮಾಜಿ ನಿರ್ದೇಶಕರು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com