ಯಕ್ಷಗಾನ ಕಲಾಕ್ಷೇತ್ರಕ್ಕೆ 'ನಿಡಂಬೂರುಬೀಡು ಬಲ್ಲಾಳ ಪ್ರಶಸ್ತಿ'

ಉಡುಪಿ: ಕಳೆದ 63 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಗೆ ಆಯ್ಕೆಯಾಗಿದೆ.
 ಪ್ರಶಸ್ತಿ ಪ್ರದಾನ ಸಮಾರಂಭ 25ರಂದು ಅಂಬಲಪಾಡಿ ದೇವಳದಲ್ಲಿ ಕುಂಭಾಶಿ ದೇವಳದ ಧರ್ಮದರ್ಶಿ ಶ್ರೀಸೂರ್ಯನಾರಾಯಣ ಉಪಾಧ್ಯರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ ಅವರು ಪ್ರಶಸ್ತಿ ಪ್ರದಾನ ಮಾಡುವರು. ಇಂದ್ರಾಳಿ ಜಯಕರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.
ಸಭೆಯ ಪೂರ್ವದಲ್ಲಿ ಮತ್ತು ಬಳಿಕ ಬಾಲ ಕಲಾವಿದರಿಂದ ಕ್ರಮವಾಗಿ 'ಧ್ರುವ ಚರಿತ್ರೆ' ಮತ್ತು 'ವೀರ ವೃಷಸೇನ' ಯಕ್ಷಗಾನ ಪ್ರದರ್ಶನವಿದೆ. ಅಂಬಲಪಾಡಿ ದೇವಳವನ್ನು ಮಾದರಿಯೆಂಬಂತೆ ರೂಪಿಸಿದ ಧರ್ಮದರ್ಶಿ ನಿ.ಬೀ. ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಅವರ ಪುತ್ರ ಡಾ.ನಿ.ಬೀ. ವಿಜಯ ಬಲ್ಲಾಳರು ಕಳೆದ ವರ್ಷ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಕಾರ್ಯದರ್ಶಿ ಜಯ. ಕೆ ತಿಳಿಸಿದ್ದಾರೆ.
ಅಪಘಾತ: ಬೈಕ್ ಸವಾರ ಗಾಯ
ಉಪ್ಪಿನಂಗಡಿ: ಕೂಟೇಲು ಎಂಬಲ್ಲಿ ಆಟೋ ರಿಕ್ಷಾ- ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ದಿನೇಶ್ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ದಿನೇಶ್ ಕಂಗಿನಾರುಬೆಟ್ಟು ನಿವಾಸಿ ಎಂದು ತಿಳಿದುಬಂದಿದೆ. ಬೈಕ್ ನೆಲ್ಯಾಡಿಯಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com