ರೆಸಾರ್ಟ್ನಲ್ಲಿ ಬಳ್ಳಾರಿ ಪೊಲೀಸರ ಗದ್ದಲ

Updated on: 

ಶಿರಸಿ: ಬಳ್ಳಾರಿ ಪೊಲೀಸರು ಎಂದು ಹೇಳಿಕೊಂಡು  ಪಾನಮತ್ತರಾಗಿ ಬಂದಿದ್ದ ಗುಂಪೊಂದು ಯಲ್ಲಾಪುರ ಪಟ್ಟಣದ ಬನಾನಾ ಕೌಂಟಿ ರೆಸಾರ್ಟಿನಲ್ಲಿ ಗಲಾಟೆ ನಡೆಸಿ, ದಾಂಧಲೆ ಎಬ್ಬಿಸಿತು.
ಫೆ. 16ರಂದು ಬನಾನಾ ಕೌಂಟಿಗೆ ಕುಟುಂಬದೊಂದಿಗೆ ಬಳ್ಳಾಯಿರಿಯಿಂದ 14-15 ಜನರ ತಂಡ ಶನಿವಾರ ಮಧ್ಯಾಹ್ನ 2 ಗಂಟೆಗೆ ಆಗಮಿಸಿದ್ದರು. ರಾತ್ರಿ 9ರ ವೇಳೆಗೆ ವ್ಯವಸ್ಥಾಪಕರನ್ನೊಳಗೊಂಡ ರೆಟಾರ್ಟ್ನ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹೊಡೆಯಲು ಬಂದರು.  ರೆಸಾರ್ಟಿನ ಅಧ್ಯಕ್ಷರು ಆಗಮಿಸಿ ಸಮಾಧಾನಪಡಿಸಲು ಯತ್ನಿಸಿದರು. ಹೋಟೆಲ್ ಸಮೂಹದ ಅಧ್ಯಕ್ಷರ ಮೇಲೆಯೂ ಕೈಮಾಡಲೂ ಮುಂದಾದರು. ಈ ಹಂತದಲ್ಲಿ ರೆಸಾರ್ಟಿನ ವ್ಯವಸ್ಥಾಪಕರು ಸ್ಥಳೀಯ ಪೊಲೀಸರಿಗೂ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ರಕ್ಷಣೆ ಕೋರಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪಿಎಸ್ಐ ಶ್ರೀಧರ್ ನೇತೃತ್ವದ ಯಲ್ಲಾಪುರ ಪೊಲೀಸರ ತಂಡ ಗಲಾಟೆ ನಿಯಂತ್ರಿಸಲು ಪ್ರಯತ್ನಿಸಿತು. ಆದಕ್ಕೂ ಜಗ್ಗದ ಬಳ್ಳಾರಿಗರು ತಾವೂ ಪೊಲೀಸರೆಂದು ಗುರುತಿನ ಚೀಟಿ ತೋರಿಸುತ್ತಾ ಯಲ್ಲಾಪುರ ಪೊಲೀಸರ ಜೊತೆಗೂ ಮಾತಿನ ಚಕಮಕಿಯಲ್ಲಿ ತೊಡಗಿಕೊಂಡರು. ರಾತ್ರಿ 10ರ ವರೆಗೂ ಸಿಬ್ಬಂದಿ ಮಾಲೀಕರ, ವ್ಯವಸ್ಥಾಪಕರ ಹಾಗೂ ಪೊಲೀಸರ ಜೊತೆಗೆ ಗುಂಡಿನ ಮತ್ತಿನಲ್ಲಿ ತೀವ್ರ ವಾಗ್ವಾದ ನಡೆಸಿದರು. ತಂಡದಲ್ಲಿದ್ದ ಇದ್ದವರ ಪೈಕಿ ಇಬ್ಬರು ಪೊಲೀಸರು ಹಾಗೂ ಉಳಿದವರು ಸ್ನೇಹಿತರೆಂದು ತಿಳಿದುಬಂದಿದೆ. ಒಬ್ಬ ಎಸ್.ಎನ್. ಮಹಬೂಬ್, ಸಾಯಿರಾಮ್ ಬಡಾವಣೆ, 12ನೇ ವಾರ್ಡ್, ಚಿತ್ತವಾಡಗಿ, ಹೊಸಪೇಟೆ, ದೂ. 9448425313 ಎಂದು ಗುರುತಿಸಲಾಗಿದ್ದು, ರೆಸಾರ್ಟಿನ ರಿಜಿಸ್ಟರಿನಲ್ಲಿಯೂ ಈ ಹೆಸರಿನ ಮೂಲಕವೇ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಇವರ ನಡವಳಿಕೆಯಿಂದ ರೆಸಾರ್ಟಿನಲ್ಲಿ ವಾಸ್ತವ್ಯ ಮಾಡಿದ್ದ ಇತರ ಪ್ರವಾಸಿಗರಿಗೂ ಕಿರಿಕಿರಿ ಉಂಟಾಯಿತು. ಯಲ್ಲಾಪುರ ಪೊಲೀಸರು ಇವರನ್ನು ವಶಕ್ಕೆ ತೆಗೆದುಕೊಂಡು ಕ್ರಮ ಜರುಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com