ಜೆಸ್ಕಾಂಗೆ ಪ್ರತಿಭಟನೆ ಶಾಕ್ ಬಿಜೆಪಿ ಆಕ್ರೋಶ
ಯಾದಗಿರಿ: ಜಿಲ್ಲೆಯ ಜನತೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಮೋರ್ಚಾ ಬಿಜೆಪಿ ವತಿಯಿಂದ ಜೆಸ್ಕಾಂ ಇಲಾಖೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದ ಕಾರಣ ರೈತರಿಗೆ ತುಂಬಾ ತೊಂದರೆಯಾಗಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು. ಕನಿಷ್ಠ 8 ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು. ಹಾಗೂ ಸುಟ್ಟು ಹೋದ ಟ್ರಾನ್ಸಫಾರಂಗಳನ್ನು ತಕ್ಷಣ ಬದಲಾಯಿಸಿ ರೈತರಿಗೆ ಅನುಕೂಲ ಮಾಡಬೇಕೆಂದು ಅವರು ಆಗ್ರಹಿಸಿದರು.
ರೈತರ ಪಂಪಸೆಟ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಸಬೇಕು. ಹಳೆಯ ತಂತಿಗಳನ್ನು ಹಾಗೂ ತಂತಿಗಳನ್ನು ಹಾಗೂ ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್‌ಸೆಟ್ ಉಳಿಸಬೇಕು. ಜಿಲ್ಲೆಯಲ್ಲಿನ ಲೈನ್‌ಮ್ಯಾನ್ ಕೊರತೆ ನೀಗಿಸಬೇಕು. ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕು. ನಿರಂತರ ಜ್ಯೋತಿ ಲೈನ್‌ಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಇದುವರೆಗೂ ಆರಂಭಿಸಿಲ್ಲ, ತಕ್ಷಣವೇ ಕಾಮಗಾರಿ ಆರಂಭಿಸಬೇಕೆಂದು ಅವರು ಆಗ್ರಹಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ, ಬಸವರಾಜ ಖಂಡ್ರೆ, ದೇವಾರಾಜ ನಾಯಕ, ನಾಗರತ್ನ ಕುಪ್ಪಿ, ಶರಣಭೂಪಾಲರೆಡ್ಡಿ ನಾಯ್ಕಲ್, ಖಂಡಪ್ಪ ದಾಸನ, ಬಸವರಾಜ ಕೊಂಕಲ್, ಹಣಮಂತ ಇಟಗಿ, ಸಣ್ಣ ಸಾಬಣ್ಣ, ಭೀಮರಾಯ ಜಂಗಲಿ, ವೆಂಕಟ್ಟರೆಡ್ಡಿ ಅಬ್ಬೆ ತುಮಕುರ, ಮಲ್ಲಿಕಾರ್ಜುನ ಗುಳೆದ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಭಗವಂತರೆಡ್ಡಿ ವಂಕಸಂಬ್ರ, ಶರಣಗೌಡ ಪಾಟೀಲ್ ಯಡ್ಡಳ್ಳಿ, ಚನ್ನಯ್ಯ ಮಾಳಿಕೇರಿ, ಸಿದ್ದಣಗೌಡ, ಮಲ್ಲಿಕಾರ್ಜುನ ಸ್ವಾಮಿ, ಇಮಾಮ್ ವಡಗೇರಾ, ಅಜ್ಮೀರ್ ಭಾಷಾ, ಅಶೋಕ, ಖಾಸೀಂಸಾಬ ಗಡ್ಡೆಸೂಗೂರ್ ಸೇರಿದಂತೆ ಮತ್ತಿತರರು ಇದ್ದರು.
ಬಂಧಿಸಿ ಬಿಟ್ಟರು
ಸುರಪುರ: ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ರಂಗಂಪೇಟೆಯ ಜೆಸ್ಕಾಂ ಕಚೇರಿಗೆ ಬಿಜೆಪಿ ರೈತ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಬೀಗ ಮುದ್ರೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮಾತನಾಡಿ, 8 ತಾಸು ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತರ ಹಿತಾಸಕ್ತಿ ಕಡೆಗಣಿಸಿದೆ. ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿ ಕಾರಿದರು.
ಬಳಿಕ ಜೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಬಿಜೆಪಿಯ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಸುರಪುರ ಪೊಲೀಸ್ ಠಾಣೆಗೆ ಕರೆ ತಂದು ನಂತರ ಬಿಡುಗಡೆ ಮಾಡಿದರು.
ತಾಲೂಕು ಘಟಕದ ಅಧ್ಯಕ್ಷ ಮಲ್ಲೇಶಿ ಪಾಟೀಲ್ ನಾಗರಾಳ, ಮುಖಂಡರಾದ ವೇಣುಗೋಪಾಲ ಜೇವರ್ಗಿ, ಮುಪ್ಪಯ್ಯ ಸ್ವಾಮಿ, ಚಂದ್ರಕಾಂತ ಸಕ್ರಿ, ನಂದಣ್ಣ ವಾರಿ, ಅನಿಲ ಗುತ್ತೇದಾರ್, ಭೀಮರಾಯ ರಫುಗಾರ, ನಾರಾಯಣರಾವ್ ಬಳಗಾನೂರು, ಗೋಪಾಲರಾವ್ ಬಾಗಲಕೋಟೆ, ಶರಣಬಸವ ಪೂಜಾರಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು. ಪಿಎಸ್‌ಐಗಳಾದ ಸುನೀಲ ಕುಮಾರ್, ಹಣಮಂತಪ್ಪ ಪಟ್ಟೆದ್, ಎಎಸ್‌ಐ ಶೇಖ್ ಯೂಸೂಫ್ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಹುಣಸಗಿಯಲ್ಲೂ ಮುತ್ತಿಗೆ
ಹುಣಸಗಿ: ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಜೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಲಾಯಿತು. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ಸಾಹು ದಂಡಿನ್, ಜಿಪಂ ಸದಸ್ಯ ಎಚ್.ಸಿ. ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಎನ್. ದಂಡಿನ್, ಗ್ರಾಪಂ ಮಾಜಿ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಇತರರು ಮಾತನಾಡಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣಕ್ಕೆ ಜೆಸ್ಕಾಂ ಉಪ ವಿಭಾಗ ಶೀಘ್ರ ಆರಂಭಿಸಬೇಕು. ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು. ಕನಿಷ್ಠ 8 ಗಂಟೆ 3 ಫೇಸ್ ವಿದ್ಯುತ್ ನೀಡಬೇಕು. ಹಳೆಯ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಜೋಡಣೆ ಮಾಡಬೇಕು. ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕು. ಸುಟ್ಟು ಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ಬದಲಾಯಿಸಬೇಕು. ಲೈನ್‌ಮನ್‌ಗಳ ಕೊರತೆ ನೀಗಿಸಬೇಕೆಂದು ಆಗ್ರಹಿಸಿದರು. ಮುಖಂಡರಾದ ವೀರೇಶ ಚಿಂಚೋಳಿ, ಟಿ.ಎಸ್. ಚಂದಾ, ಬಿ.ಎಂ. ಅಳ್ಳಿಕೋಟಿ, ಚನ್ನಯ್ಯಸ್ವಾಮಿ ಹಿರೇಮಠ, ಸೋಮಶೇಖರಸ್ವಾಮಿ ಸ್ಥಾವರಮಠ, ಬಸಣ್ಣ ದೇಸಾಯಿ, ಈರಪ್ಪ ದೇಸಾಯಿ, ಸಿದ್ದನಗೌಡ ಕರಿಭಾವಿ, ಸಿದ್ರಾಮಪ್ಪ ಮುದಗಲ್, ಬಸವರಾಜ ವೈಲಿ ಮತ್ತಿತರರು ಭಾಗವಹಿಸಿದ್ದರು.
ಶಹಾಪುರದಲ್ಲಿ ಧರಣಿ
ಶಹಾಪುರ: ಅಸಮರ್ಪಕ ವಿದ್ಯುತ್ ಸರಬರಾಜು, ಅನಿಯಮಿತ ಲೋಡ್ ಶೆಡ್ಡಿಂಗ್ ಪಜಾ, ಪಪಂದವರಿಗೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಬಿಜೆಪಿ ಸ್ಥಳೀಯ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಮುಖಂಡ ಶಂಕ್ರಣ್ಣ ವಣಿಕ್ಯಾಳ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿದ್ದು, ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದರು. ಮುಖಂಡರಾದ ಆರ್. ಚನ್ನಬಸು, ಬಸವರಾಜ ಅರುಣಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ಮಾತನಾಡಿದರು. ಯಲ್ಲಯ್ಯ ನಾಯಕ, ರಾಮನಗೌಡ ಚಿತ್ತರಗಿ, ಬಸಯ್ಯಸ್ವಾಮಿ ಯಕ್ತಾಪುರ, ಮುದಕಪ್ಪಗೌಡ, ಶಾಂತಯ್ಯಸ್ವಾಮಿ ತಿಪ್ಪಣ್ಣ ರಾಠೋಡ, ಅನಿಲರಾಜ, ದೇವಿಂದ್ರಪ್ಪ ಕೊನೇರ, ತ್ರಿಶೂಲ ಹವಾಲ್ದಾರ, ಶರಭಣ್ಣ ರಸ್ತಾಪುರ, ಶಂಕರ ಕೊನೇರ, ಹನುಮಂತ್ರಾಯ, ರೇವಣಸಿದ್ದಪ್ಪ ಸೈದಾಪುರ ಇದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ