ಚನರಾಯಪಟ್ಟಣ: ತಾಲೂಕಿನಲ್ಲಿ ಮುಂದಿನ ಎರಡು ತಿಂಗಳಲ್ಲಿ 10 ಸಾವಿರ ಶೌಚಾಲಯಗಳನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ತಾಲೂಕಿನ ಡಿ.ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ವಚ್ಛತಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಪ್ರತಿ ಕುಟುಂಬಗಳಲ್ಲಿಯೂ ಶೌಚಾಲಯ ಕಡ್ಡಾಯ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ನೌಕರರು ಜನತೆಯ ಮನವೊಲಿಸಿ ಮುಂದಿನ ಎರಡು ತಿಂಗಳಲ್ಲಿ 10 ಸಾವಿರ ಶೌಚಾಲಯಗಳನು ನಿರ್ಮಿಸುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು. ಗ್ರಾಮೀಣ ಜನತೆಗೆ ಶೌಚಾಲಯ ಬಳಕೆ ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸಿ ಉದ್ಯೋಗ ಖಾತ್ರಿ ಹಾಗೂ ಜಿಪಂನಿಂದ ನೀಡುವ ಅನುದಾನದಿಂದ ಶೌಚಾಲಯ ನಿರ್ಮಿಸಿಕೊಂಡು ಅದರ ಉಪಯೋಗವನು ಪಡೆದುಕೊಳ್ಳಲು ಮನೆ ಮನೆಗೆ ತೆರಳಿ ಅರಿವು ಮೂಡಿಸುವತ್ತಾ ಮುಂದಾಗಬೇಕು ಎಂದು ಹೇಳಿದರು. ಗ್ರಾಮ ಪಂಚಾಯಿತಿಗಳ ನೌಕರರು ತಮ್ಮ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಗೂ ಶೌಚಾಲಯ ನಿರ್ಮಿಸುವಂತೆ ಪ್ರೇರೇಪಿಸಿ ನಿರ್ಮಿಸಿದರೆ 20 ಲಕ್ಷ ಹೆಚ್ಚುವರಿ ಅನುದಾನ ಸರ್ಕಾರ ನೀಡುವುದರಿಂದ ನೌಕರರು ಹಾಗೂ ಸದಸ್ಯರುಗಳು ಜನತೆಯ ಮನಮೊಲಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ತಾಲೂಕಿನ ಎಲ್ಲಾ ಕುಟುಂಭಗಳು ಶೌಚಾಲಯಗಳನು ನಿರ್ಮಿಸಿಕೊಳ್ಳುವಂತೆ ಮನವೊಲಿಸಿ ಶೌಚಾಲಯ ನಿರ್ಮಾಣಕ್ಕೆ ಸಹಾಯ ನೀಡಿ ಶೌಚಾಲಯ ಯುಕ್ತ ತಾಲೂಕಿಗೆ ಶ್ರಮಿಸಬೇಕಾಗಿ ಕೋರಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರುವಮ್ಮ, ಉಪಾಧ್ಯಕ್ಷ ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶಿವಣ್ಣ, ಹೇಮಾವತಿ ಸಹಕಾರ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಇದ್ದರು.
ಅದ್ಧೂರಿ ಟಿಪ್ಪು ಜನ್ಮ ದಿನಾಚರಣೆ
ಹೊಳೆನರಸೀಪುರ: ಮೈಸೂರಿನ ಹುಲಿ ಟಿಪ್ಪುಸುಲ್ತಾನ್ ಜನ್ಮ ದಿನೋತ್ಸವವನು ಪಟ್ಟಣದಲ್ಲಿ ಮುಸ್ಲಿಮರು ಅದ್ದೂರಿಯಿಂದ ಆಚರಿಸಿದರು. ಟಿಪ್ಪು ಬಗ್ಗೆ ಘೋಷಣೆ ಕೂಗುತ್ತಾ ವಾಹನಗಳಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಟಿಪ್ಪು ವೇಷದಾರಿಯನು ಕುದುರೆ ಮೇಲೆ ಕುಳ್ಳಿರಿಸಿ ಮೆರವಣಿಗೆಯ ಮುಂಭಾಗದಲ್ಲಿ ಕರೆದೊಯ್ದರು. ಹುಲಿಯ ಗೊಂಬೆಯನು ವಾಹನದ ಮುಂಭಾಗಲ್ಲಿ ಇರಿಸಿದ್ದರು. ಕಾಂಗ್ರೆಸ್ ಯುವ ಮುಖಂಡ ಮುಜಾಹಿದ್, ಪುರಸಭೆ ಮಾಜಿ ಸದಸ್ಯ ರೆಹಮಾನ್ಖಾನ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.
Advertisement