ಮಡಿಕೇರಿ: ಬಾದಾಮಿ ಬಳಿಯಲ್ಲಿ ಬಾಲಕ ತಿಮ್ಮಣ್ಣ ಹಟ್ಟಿ ತೆರೆದ ಕೊಳವೆ ಬಾವಿ ಗುಂಡಿಗೆ ಬಿದ್ದ ಘಟನೆ ಕೊಡಗು ಜಿಲ್ಲಾದ್ಯಂತ ಜನರ ಆತಂಕಕ್ಕೆ ಕಾರಣವಾಗಿದೆ. ಬಾಲಕ ತಿಮ್ಮಣ್ಣ ಸುರಕ್ಷಿತವಾಗಿ ಕೊಳವೆಬಾವಿಯಿಂದ ಹೊರಬರಲಿ ಎಂದು ಪ್ರಾರ್ಥಿಸಿ ಮಡಿಕೇರಿಯಲ್ಲಿಯೂ ಮಕ್ಕಳು, ಸಾರ್ವಜನಿಕರು ಪ್ರಾರ್ಥನೆ ನಡೆಸಿದರು. ಬಾಲಕ ತಿಮ್ಮಣ್ಣ ಸುರಕ್ಷಿತವಾಗಿ ಕೊಳವೆ ಬಾವಿ ಗುಂಡಿಯಿಂದ ಮೇಲೆದ್ದು ಬರಲಿ ಎಂದು ಮಡಿಕೇರಿಯಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ನಡೆಸಿದರು. ಯೂರೋ ಕಿಡ್ಸ್ ಸಂಸ್ಥೆ ಪುಟಾಣಿಗಳು ಶಾಲೆಯಲ್ಲಿ ತಿಮ್ಮಣ್ಣನಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಮಡಿಕೇರಿಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಭಕ್ತರು ಕೂಡ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಡಿಕೇರಿ ನಗರಸಭಾಧ್ಯಕ್ಷೆ ಜುಲೇಕಾಬಿ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯ ಕೆ.ಎಂ. ಗಣೇಶ್, ಎ.ಸಿ. ದೇವಯ್ಯ, ಪ್ರಕಾಶ್ ಆಚಾರ್ಯ, ಉಸ್ಮಾನ್ , ಪೌರಾಯುಕ್ತೆ ಪುಪ್ಪಾವತಿ ಸೇರಿದಂತೆ ಅನೇಕರು ಇದ್ದರು.
Advertisement