ಭೂ ಕುಸಿತ: ಮಳೆಯಲ್ಲಿ ತೆರವು ಕಾರ್ಯಾಚರಣೆ

Updated on: 

ಮಡಿಕೇರಿ: ಭೂ ಕುಸಿತ ಸಂಭವಿಸಿದ್ದ ಕೊಡಗು ಜಿಲ್ಲೆಯ ತಲಕಾವೇರಿ ವ್ಯಾಪ್ತಿಯ ವ್ಯೂ ಪಾಯಿಂಟ್‌ನಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಬಂಡೆಕಲ್ಲುಗಳನ್ನು ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಇನ್ನು 3- 4 ದಿನಗಳಲ್ಲಿ ಕಾವೇರಿ ಕ್ಷೇತ್ರದ ರಸ್ತೆ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳ್ಳುವ ಸಾಧ್ಯತೆಯಿದೆ.
ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ನಡುವೆಯೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಉಸ್ತುವಾರಿಯಲ್ಲಿ ಬೃಹತ್ ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದೆ. ಮತ್ತಷ್ಟು ಬಂಡೆ ಉರುಳುವ ಅಪಾಯದ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ. ಸದ್ಯಕ್ಕೆ ತಲಕಾವೇರಿ ವ್ಯಾಪ್ತಿಯ ಗ್ರಾಮಸ್ಥರ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ ದೂರದೂರುಗಳಿಂದ ಬಂದಿದ್ದ ಕೆಲ ಯಾತ್ರಾರ್ಥಿಗಳು ಭಾಗಮಂಡಲದಲ್ಲೇ ತಮ್ಮ ಯಾತ್ರೆ ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವರು ತಣ್ಣಿಮಾನಿ ಮೂಲಕ ಕಚ್ಚಾ ರಸ್ತೆಯಲ್ಲಿ ಬಾಡಿಗೆ ಜೀಪ್‌ನಲ್ಲಿ ತಲಕಾವೇರಿಗೆ ತೆರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com