ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಬಜೆಟ್ನಲ್ಲಿ ಬಂಪರ್ ಕೊಡುಗೆ ಸಿಕ್ಕಿದೆ. ಕೋಲಾರ ಜಿಲ್ಲೆಯಲ್ಲಿ ರೇಲ್ವೆ ಕೋಚ್ ನಿರ್ಮಾಣ ಮತ್ತು ನಿರ್ವಹಣಾ ಘಟಕ ಸ್ಥಾಪನೆ ಆಗುವುದರಿಂದ ನಿರುದ್ಯೋಗಿಗಳಿಗೆ ಸಹಾಯವಾಗುತ್ತದೆ.
-ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೋಲಾರ.
ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಲಭಿಸಿರುವುದರಿಂದ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪನವರು ಕೂಡಲೇ ಯೋಜನೆ ಅನುಷ್ಠಾನಕ್ಕೆ ಮುಂದಾಗದಿದ್ದರೆ ಜನರ ಮುಗಿನ ಮೇಲೆ ತುಪ್ಪ ಸವರಿದಂತಾಗುತ್ತದೆ.
-ಬ್ಯಾಲಹಳ್ಳಿ ಎಂ.ಗೋವಿಂದಗೌಡ
ಕಳೆದ ಸಾಲಿನಲ್ಲೇ ಜಿಲ್ಲೆಗೆ ರೇಲ್ವೆ ಕೋಚ್ ಮಂಜೂರಾಗಿದ್ದು ಅನುಷ್ಟಾನ ಆಗಿಲ್ಲ. ಈ ಬಜೆಟ್ನಲ್ಲಿ ಅನುದಾನ ಹೆಚ್ಚಿಸಲಾಗಿದೆಯೇ ಹೊರತು ಯೋಜನೆ ಯಾವಾಗ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿಲ್ಲ.
-ಕೆ.ಎಸ್.ಗಣೇಶ್, ಪತ್ರಕರ್ತರು,
ರೇಲ್ವೆ ಸಚಿವರು ಪ್ರಯಾಣ ದರ ಹೆಚ್ಚಿಸದಿರುವುದು ಸಮಾಧಾನ ತಂದಿದೆ. ತತ್ಕಾಲ್ ಟಿಕೆಟ್ ದರ ಹೆಚ್ಚಳ ಸರಿಯಲ್ಲ. ಮಾರಿಕುಪ್ಪಂ-ಬೆಂಗಳೂರು ನಡುವೆ ಪ್ಯಾಸೆಂಜರ್ ರೈಲು ಪ್ರತಿನಿತ್ಯ ಓಡಾಡುವುದಕ್ಕೆ ಅವಕಾಶ ಮಾಡಿರುವುದು ಒಳ್ಳೆಯ ನಿರ್ಧಾರ.
- ನರೇಂದ್ರಬಾಬು, ವಕೀಲರು
ಕೇಂದ್ರ ರೇಲ್ವೆ ಸಚಿವರು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ.ಕ್ರಿಯಾಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದಲ್ಲಿ ಮಾತ್ರ ಬಜೆಟ್ ಬಗ್ಗೆ ನಂಬಿಕೆ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.
-ಎಸ್.ಎನ್.ಶ್ರೀರಾಮ್, ಕೂಡಾ ಮಾಜಿ ಅಧ್ಯಕ್ಷ, ಕೋಲಾರ.
ಕೇಂದ್ರ ರೇಲ್ವೆ ಬಜೆಟ್ ಖುಷಿ ತಂದಿದೆ. ಆದರೆ, ಘೋಷಣೆ ಮಾಡುವುದಕ್ಕಿಂತ ಅನುಷ್ಠಾನ ಮುಖ್ಯ. ಬಜೆಟಟ್ನಲ್ಲಿ ಘೋಷಿಸಿದಂತೆಯೇ ಹೊಸ ರೇಲ್ವೆ ಮಾರ್ಗಗಳ ಕಾಮಗಾರಿ ತ್ವರಿತವಾಗಿ ಮುಗಿಯಬೇಕು. ಜನರ ಬಳಕೆಗೆ ಆದಷ್ಟು ಬೇಗ ಸಿಗಬೇಕು.
-ಯಲುವಹಳ್ಳಿ ರಮೇಶ್, ರೈತ ಮುಖಂಡರು
ಇದು ಒಳ್ಳೆಯ ರೇಲ್ವೆ ಬಜೆಟ್. ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿರುವುದು ಸಂತಸದ ವಿಷಯ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ನಿರೀಕ್ಷೆ ನಿಜವಾಗಿದೆ.
-ಮಂಚನಬಲೆ ಶ್ರೀಧರ್, ರೇಲ್ವೆ ಬಳಕೆದಾರರ ಸಮಿತಿ ಸದಸ್ಯ,
ಚಿಕ್ಕಬಳ್ಳಾಪುರ-ಬೆಂಗಳೂರು ಮಾರ್ಗವಾಗಿ ರೇಲ್ವೆ ಸೌಲಭ್ಯ ಸಾಲದು. ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ಪುಟ್ಟಪರ್ತಿ ರೈಲ್ವೆ ಹಳಿ ನಿರ್ಮಾಣದ ಬಗ್ಗೆ ಹೇಳಿಕೊಂಡು ಬರಲಾಗಿದೆ. ಈಗಲಾದರೂ ಬೇಗ ಮುಗಿಯಬೇಕು.
-ಎ.ವಿ.ಭೈರೇಗೌಡ, ಬಿಜೆಪಿ ಮುಖಂಡರು
ಕೋಲಾರದಲ್ಲಿ ರೇಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣ ಘೋಷಣೆ ಮಾಡಿರುವುದು. ಚಿಕ್ಕಬಳ್ಳಾಪುರ-ಪುಟ್ಟಪರ್ತಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಾಗುವುದರ ಬಗ್ಗೆ ಬಜೆಟ್ನಲ್ಲಿ ತಿಳಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯಕ್ಕೆ ಇನ್ನಷ್ಟು ಕೊಡುಗೆಗಳ ಅವಶ್ಯಕತೆ ಇತ್ತು.
-ಎಂ.ಮುನಿರಾಜು, ಪತ್ರಕರ್ತರು
ರೇಲ್ವೆ ಪ್ರಗತಿಯು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಆದಷ್ಟು ಬೇಗ ಕಾಮಗಾರಿಗಳನ್ನು ಕೈಗೊಂಡು ಮುಗಿಸಬೇಕು. ಆದರೆ, ಕೆಲ ಸಂದರ್ಭದಲ್ಲಿ ಕೆಲ ಕೆಲಸಮುಗಿಯುವುದಿಲ್ಲ.ಈ ಬಾರಿ ಇದಾಗದಿರಲಿ.
-ಅವಿನಾಶ್, ನಾಗರಿಕ, ಚಿಕ್ಕಬಳ್ಳಾಪುರ