ಕೋಲಾರ: ಬಾಲ್ಯದಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಿದರೆ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆಯೂ ವೃದ್ಧಿಸುವುದು ಎಂದು ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರಾದ ಬಿ.ಎಂ. ಶಂಕರೇಗೌಡ ತಿಳಿಸಿದರು
ಅಣ್ಣೆಹಳ್ಳಿಯಲ್ಲಿ ಹೋಳೂರು ಹೋಬಳಿ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಕೆ.ಬಿ. ರೆಡ್ಡಪ್ಪ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಾಲ್ಯದಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಿ, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿಯನ್ನು ತರುವಂತೆ ಕಿವಿಮಾತು ಹೇಳಿದರು. ಕೆ.ನಾರಾಯಣರೆಡ್ಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಣ್ಣಿಹಳ್ಳಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪಿ. ನಾರಾಯಣಸ್ವಾಮಿ ವಹಿಸಿದ್ದರು. ಸಮಾರಂಭದಲ್ಲಿ ಎಂ.ನಾರಾಯಣಸ್ವಾಮಿ, ಚಂದ್ರಪ್ಪ, ಜಿ.ರಂಗಸ್ವಾಮಿ, ವಿ. ಶ್ರೀನಿವಾಸ್, ನಾರಾಯಣಮ್ಮ, ರವೀಂದ್ರಬಾಬು, ಬಿ.ಮುನಿರಾಜು, ಎ.ಎನ್.ಗೋಪಾಲ್, ಜಿ.ಚಂದ್ರಶೇಖರ್, ವಿ. ರಮೇಶ್, ಎ.ಎಂ. ಶ್ರೀರಾಮಯ್ಯ, ಪ್ರಕಾಶ್, ನಾಗನಾಯಕನಹಳ್ಳಿ ಪ್ರಭಾಕರ್ ಇದ್ದರು. ಚಂದ್ರಪ್ಪ ನಿರೂಪಿಸಿ, ವಿ.ಶ್ರೀನಿವಾಸ್ ಸ್ವಾಗತಿಸಿ, ಸಿ.ಆರ್.ಪಿ. ನಾರಾಯಣಸ್ವಾಮಿ ವಂದಿಸಿದರು.