ಗಂಗಾವತಿ: ತಾಪಂ ಮಂಥನ ಸಭಾಂಗಣದಲ್ಲಿ ಪಶುಸಂಗೋಪನಾ ಸಿಬ್ಬಂದಿಗೆ ತಾಂತ್ರಿಕ ಕಾರ್ಯಾಗಾರ ಜರುಗಿತು. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಇಲಾಖೆಯ ಉಪನಿರ್ದೇಶಕ ಡಾ ಪಿ.ಎಂ. ಹಿಂಬರಗಿ ಉದ್ಘಾಟಿಸಿದರು. ಪಶುಪಾಲನಾ ಸಿಬ್ಬಂದಿಗೆ ತಾಂತ್ರಿಕತೆ ಬಳಕೆ, ಪಶುಗಳಿಗೆ ಬರುವ ರೋಗ ಪತ್ತೆ ಹಚ್ಚುವ ತಿಳಿವಳಿಕೆ ನೀಡಲಾಗುತ್ತದೆ ಎಂದರು. ಡಾ ಎಸ್.ಎಚ್. ಪಾಟೀಲ ಉಪನ್ಯಾಸ ನೀಡಿದರು. ಡಾ ಚನ್ನಬಸಪ್ಪ ಹಳ್ಳದ, ಎಂ.ಎಂ. ಹಳ್ಳೂರು, ವೈಜನಾಥ ಮಾನ್ಕರ್, ಮುರಗಪ್ಪ, ಸರ್ದಾರಲಿ ಇದ್ದರು.