ಗಂಗಾವತಿ: ಗಂಗಾವತಿ ನಗರಸಭೆಯ ಜೆಡಿಎಸ್ ಸದಸ್ಯರು ಪಕ್ಷ ತೊರೆಯುವುದಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಬಿ. ಖಾದ್ರಿ ಸ್ಪಷ್ಟಪಡಿಸಿದರು. ಪಕ್ಷದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರೂ ಸೇರಿದಂತೆ ನಗರಸಭೆಯ 24 ಸದಸ್ಯರು ಜೆಡಿಎಸ್ನಲ್ಲಿದ್ದಾರೆ. ಆದರೆ, ದೇವಪ್ಪ ಕಾಮದೊಡ್ಡಿ ಮಾತ್ರ ಪಕ್ಷ ಬಿಟ್ಟು ಹೋಗುವುದಾಗಿ ತಿಳಿಸಿದ್ದಾರೆ. ಅವರು ಪಕ್ಷ ಬಿಟ್ಟರೆ ಧಕ್ಕೆಯಾಗುವುದಿಲ್ಲ ಎಂದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಂದ ಸಾಕಷ್ಟು ಲಾಭ ಪಡೆದಿರುವ ದೇವಪ್ಪ ಕಾಮದೊಡ್ಡಿ ಅವರು ಈಗ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ನಗರಸಭೆಯಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ, ಲೂಟಿ ಮಾಡುವುದೇ ಕಾಮದೊಡ್ಡಿ ಅವರ ಕಾರ್ಯವಾಗುತ್ತದೆ. ಅವರು ಪಕ್ಷ ತ್ಯಜಿಸುವುದರಿಂದ ಜೆಡಿಎಸ್ ನಿರಾಳವಾಗುತ್ತದೆ ಎಂದರು. ಶ್ಯಾಮಾಚಾರ ಜೋಶಿ, ಮನೋಹರ ಹೇರೂರು ಇದ್ದರು.