ಕೊಪ್ಪಳ: ಬಿಸರಳ್ಳಿ ಗ್ರಾಮದ ಎಪಿಎಂಸಿ ಮಾಜಿ ಸದಸ್ಯ ಸೈಯದಸಾಬ್ ಎಕಲಾಸಪುರ ಕಾಂಗ್ರೆಸ್ ತೊರೆದು ಇಕ್ಬಾಲ್ ಅನ್ಸಾರಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗುತ್ತಿಗೆದಾರ ಸುರೇಶ ಭೂಮರೆಡ್ಡಿ, ತಾಲೂಕು ಅಧ್ಯಕ್ಷ ಅಂದಪ್ಪ ಮರೆಬಾಳ, ವೀರೇಶ ಮಹಾಂತಯ್ಯನಮಠ, ವಿಜಯ ಸ್ವಾಮಿ ಬಿಸರಳ್ಳಿ, ಬಸವರಾಜ ಬೆಲ್ಲದ, ಹುಚ್ಚಯ್ಯ ಸ್ವಾಮಿ ಹಾಗೂ ಬಿಸರಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.