ನಾಳೆ ಹೈ-ಕ ಹೋರಾಟಗಾರರಿಗೆ ಸನ್ಮಾನ

Updated on: 

ಕೊಪ್ಪಳ: ಶೋಷಿತ ಹೈದ್ರಾಬಾದ್ ಕರ್ನಾಟಕ ಪ್ರಗತಿಗೆ ಸಂವಿಧಾನದ 371ನೇ ವಿಧಿ ಅನುಷ್ಠಾನ ಮಾಡುವಂತೆ ಅವಿರತವಾಗಿ ಹೋರಾಟ ಮಾಡಿದ ಮಾಜಿ ಸಚಿವ ವೈಜನಾಥ ಪಾಟೀಲ ಸೇರಿದಂತೆ ಈ ಹೋರಾಟದಲ್ಲಿ ಪಾಲ್ಗೊಂಡಿರುವವರನ್ನು ಗುರುತಿಸಿ, ಅವರಿಗೆ ಕೊಪ್ಪಳ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಜ. 24ರಂದು ಸಾಹಿತ್ಯ ಭವನದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ವಿ. ಪಾಟೀಲ ತಿಳಿಸಿದ್ದಾರೆ.
ಮಂಗಳವಾರ ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಸಮಿತಿಯನ್ನು ಕೇವಲ ಕೊಪ್ಪಳ ಅಭಿವೃದ್ಧಿಗೆ ಮಾತ್ರ ಸೀಮಿತ ಮಾಡಬಾರದು ಎಂಬ ಕಾರಣಕ್ಕೆ ಇತರೆ ಕಾರ್ಯಕ್ರಮ ರೂಪಿಸಲು ಯೋಜಿಸಲಾಗಿದೆ. ವೈಜನಾಥ ಪಾಟೀಲರ ಜೊತೆಗೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಹೋರಾಟಗಾರರು ಮತ್ತು ಈ ಹೋರಾಟಕ್ಕೆ ಸಹಾಯ ಹಸ್ತ ನೀಡಿದ್ದ ಈ ಭಾಗದ ಜನ ಪ್ರತಿನಿಧಿಗಳನ್ನೂ ಸನ್ಮಾನಿಸಲಾಗುವುದು ಎಂದರು.
ಅಂದು ವೈಜನಾಥ ಪಾಟೀಲ್‌ರನ್ನು ಇಲ್ಲಿನ ಗಡಿಯಾರ ಕಂಬದಿಂದ ಸಾಹಿತ್ಯ ಭವನದ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಗುವುದು. ನಂತರ ಸಾಹಿತ್ಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಪ ಸದಸ್ಯ ಹಾಲಪ್ಪ ಆಚಾರ್ ಉದ್ಘಾಟಿಸುವರು.
ಸ್ವಾಗತ ಸಮಿತಿ ಅಧ್ಯಕ್ಷ ರುದ್ರಮುನಿ ಗಾಳಿ, ವೈಜನಾಥ ದಿವಟರ್, ನಾಗರಾಜ ಬಳ್ಳಾರಿ, ಸರೋಜಾ ಬಾಕಳೆ, ವೀರಣ್ಣ ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com