ಯಲಬುರ್ಗಾ: ಸ್ಥಳೀಯ ಪಪಂದಿಂದ ಸಾರ್ವಜನಿಕರಿಗೆ ರು.150ಗೆ 4,500 ಲೀಟರ್ ಶುದ್ಧ ಕುಡಿಯುವ ನೀರು ವಿತರಿಸುವ ನೂತನ ಟ್ಯಾಂಕಿಗೆ ಶನಿವಾರ ಸಂಜೆ ಪಪಂ ಅಧ್ಯಕ್ಷ ಸುರೇಶಗೌಡ ಶಿವನಗೌಡ ಚಾಲನೆ ನೀಡಿದರು. ಪಪಂ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ನಿತ್ಯ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊರೆಸಿದ ಹಲವಾರು ಕೊಳವೆಬಾವಿಗಳಿಂದಲೂ ನೀರು ಸಿಗುತ್ತಿರಲಿಲ್ಲ. ಇದ್ದ ಕೆಲವು ಬೋರ್ವೆಲ್ಗಳು ಸಹ ಹಾಳಾಗಿದ್ದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗಿತ್ತು. ಈ ಸಮಸ್ಯೆ ನಿವಾರಣೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಜನರ ಸಮಸ್ಯೆ ನಿವಾರಿಸಲು ತಿಂಗಳ ಬಾಡಿಗೆಯಂತೆ ಪಟ್ಟಣದ ಸರ್ಕಾರಿ, ಖಾಸಗಿ ಮಾಲೀಕತ್ವದ ಕೊಳವೆಬಾವಿಗಳಿಂದ ನೀರು ಪಡೆದು # 150ಕ್ಕೆ 4,500 ಲೀ. ನೀರು ವಿತರಿಸಲಾಗುವುದು ಎಂದರು. ರತ್ನಮ್ಮ ಕೊಡಗಲಿ, ಜಯಶ್ರೀ ಕಂದಕೂರು, ಅಮರಪ್ಪ ಕಲಬುರ್ಗಿ, ಚಂದುಸಾಬ್ ಕವಲೂರು, ರಮೇಶ ಗೊಂದಕರ್, ಚನ್ನಪ್ಪ, ಶಿವಕುಮಾರ, ರಮೇಶ ಬೇಲೇರಿ ಇತರರು ಇದ್ದರು.