ಕುಕನೂರ: ಸ್ಥಳೀಯ ಆರ್ಯರ ಮತ್ತು ಸೊರಟೂರ ಆಯಿಲ್ ಮಿಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಫೆ. 2ರಂದು ಪ್ರಿಯಾಂಕಾ ರೂರಲ್ ಎಜುಕೇಷನ್ ಅಂಡ್ ಮಲ್ಟಿಪರ್ಪಸ್ ಹಾಗೂ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯ ಯೋಧ ದಿ ಯಜಮಾನ್ ರೊಕ್ಕಪ್ಪನವರ ಆರ್ಯರ 20ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ ಮತ್ತು ವೀರ ರಾಣಿ ಕಿತ್ತೂರ ಚನ್ನಮ್ಮಳ 189ನೇ ವಿಜಯೋತ್ಸವದ ಅಂಗವಾಗಿ ಚನ್ನಮ್ಮನ ಲಾವಣಿ ಪದಗಳ ಸಿಡಿ ಲೋಕಾರ್ಪಣೆಗೊಳ್ಳಲಿದೆ. ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಸಂಗಣ್ಣ ಕರಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲ ಸಿಡಿ ಬಿಡುಗಡೆ ಮಾಡುವರು. ಅತಿಥಿಗಳಾಗಿ ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ಸಂಸದ ಶಿವರಾಮಗೌಡ, ಶಾಸಕರಾದ ಈಶಣ್ಣ ಗುಳಗಣ್ಣವರ, ಹಾಲಪ್ಪ ಆಚಾರ, ಎಚ್.ಆರ್. ಶ್ರೀನಾಥ, ಕೆ.ಬಿ. ಬ್ಯಾಳಿ, ಡಾ ಮಲ್ಲಿಕಾರ್ಜುನ ರಾಂಪುರ, ವೀರಣ್ಣ ನಿಂಗೋಜಿ, ವಿರೂಪಾಕ್ಷಪ್ಪ ಚಂಡೂರ, ಗುರುಲಿಂಗಯ್ಯ ಹಿರೇಮಠ, ಕಾಶೀಮಸಾಬ ತಳಕಲ್ಲ ಭಾಗವಹಿಸಲಿದ್ದಾರೆ.ಅಲ್ಲಮಪ್ರಭು ಬೆಟ್ಟದೂರ, ಡಾ ಬಸವರಾಜ ಸಬರದ, ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು ಎಂದು ಗವಿಸಿದ್ದಪ್ಪ ಆರೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.