ಕರೆಂಟ್ ಶಾಕ್ಗೆ ರೈತರು ತತ್ತರ

Updated on: 

ಕೊಪ್ಪಳ: ಮಳೆ ಕೈಕೊಟ್ಟರೇನಂತೆ, ನೀರಾವರಿ ಇದೆಯಲ್ಲ ಎಂಬ ಧೈರ್ಯದಲ್ಲಿದ್ದ ರೈತ ಈಗ ಕಂಗಾಲಾಗಿದ್ದಾನೆ. ವಿದ್ಯುತ್ ಅಭಾವ ಅವನ ಬೆಳೆಯ ಕನಸನ್ನು ಬರಡಾಗಿಸಿದೆ. ಕೈಕೊಟ್ಟ ಮುಂಗಾರಿನಿಂದ ಕೇವಲ ಮಳೆಯಾಧಾರಿತ ಕೃಷಿ ನಂಬಿದ ರೈತರಷ್ಟೇ ಅಲ್ಲ, ನೀರಾವರಿ ಸೌಲಭ್ಯವುಳ್ಳ ರೈತರೂ ಕಂಗಾಲಾಗಿರುವುದು 'ಕನ್ನಡಪ್ರಭ' ರಿಯಾಲಿಟಿ ಚೆಕ್ನಿಂದ ಸಾಬೀತಾಗಿದೆ.
ಒಣಗುತ್ತಿರುವ ಬೆಳೆ: ವಿದ್ಯುತ್ ಸಮಸ್ಯೆಯಿಂದಾಗಿ ನೀರಾವರಿ ಭೂಮಿಯ ಎಕರೆಗಟ್ಟಲೆಯ ಬೆಳೆಗಳು ಕಮರಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೊಳವೆ ಬಾವಿ ನೀರು ನಂಬಿ ಇರಕಲ್, ಬೂದುಗುಂಪಾ, ಟಣಕನಕಲ್ ಭಾಗದ ರೈತರು ಮೆಕ್ಕೆಜೋಳ, ಕಬ್ಬನ್ನು ಹೆಚ್ಚಾಗಿ ಬಿತ್ತಿದ್ದಾರೆ. ಆದರೆ, ವಿದ್ಯುತ್ ಇವರ ಸಹಾಯಕ್ಕೆ ಸಿಗುತ್ತಿಲ್ಲ. ವಿದ್ಯುತ್ ಇಲ್ಲದಿದ್ರೆ ನಾವು ಬೆಳೆ ಬೆಳೆಯೋದು ಹೇಗೆ ಎನ್ನುವುದು ಇವರ ಅಳಲು.
ಕೊರತೆ ಹೇಗೆ?: ಜಿಲ್ಲೆಯಲ್ಲಿ ಗಂಟೆಗೆ 60-70 ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ ಸಿಗುತ್ತಿರುವುದು ಕೇವಲ 20-30 ಮೆ.ವ್ಯಾ. ನಿಗದಿಯಂತೆ ಗ್ರಾಮೀಣ ಪ್ರದೇಶಕ್ಕೆ 7 ಗಂಟೆ ತ್ರಿಫೇಸ್, ರಾತ್ರಿಪೂರ್ತಿ ಸಿಂಗಲ್ ಫೇಸ್ ನೀಡಬೇಕು. ಆದರೆ, ತ್ರಿಫೇಸ್ ಕೇವಲ ಒಂದೆರಡು ಗಂಟೆ ಲಭ್ಯವಿದ್ದು, ಕೇವಲ 4 ತಾಸು ಸಿಗುತ್ತಿದೆ.

ಸದ್ಯದ ವಿದ್ಯುತ್ ವ್ಯವಸ್ಥೆಯಿಂದ ರೈತರು ರೋಸಿಹೋಗಿದ್ದು, ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ.
ಟಿ ಹನುಮಂತಪ್ಪ ಹೊಳೆಯಾಚೆ, ರೈತ ಸಂಘದ ಜಿಲ್ಲಾಧ್ಯಕ್ಷ

ಬೇಡಿಕೆಗೂ ಪೂರೈಕೆಗೂ ಅಜಗಜಾಂತರ ವ್ಯತ್ಯಾಸವಿದ್ದು ನಿರ್ವಹಣೆ ಕಷ್ಟವಾಗಿದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಕಡಿತ ಮಾಡುವುದು ಅನಿವಾರ್ಯವಾಗಿದೆ.
ಟಿ ಎಂ.ಎಸ್. ಪತ್ತಾರ, ಜೆಸ್ಕಾಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com