ಮೈಸೂರಿಗೆ ಅಧಿಕಾರಿಗಳು

Updated on: 

ಕೊಪ್ಪಳ:  ಜೀತದಿಂದ ಪಾರಾಗಿ ಬಂದಿರುವ ಬಾಲಕಿಯನ್ನು ಕರೆದುಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮೈಸೂರಿಗೆ ದೌಡಾಯಿಸಿದ್ದಾರೆ. ಅಲ್ಲಿ ಯಾರ ಮನೆಯಲ್ಲಿ ಜೀತಕ್ಕೆ ಇದ್ದಳು ಎನ್ನುವುದನ್ನು ಪತ್ತೆ ಮಾಡಲು ಮತ್ತು ಪ್ರಾಥಮಿಕ ಮಾಹಿತಿ ಕಲೆ ಹಾಕಲು ತೆರಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಸಂತಪ್ರೇಮಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರಳಿದೆ. ಬಾಲಕಿ ನೀಡಿರುವ ಖಚಿತ ಮಾಹಿತಿ ಆಧರಿಸಿ ತನಿಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಇನ್ನು ಇದೇ ವೇಳೆ ಬಾಲಕಿ ಕುಟುಂಬದ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಗುಲ್ಬರ್ಗ ಪೀಠಕ್ಕೆ ಕೊಪ್ಪಳ, ಬಳ್ಳಾರಿ ಸೇರ್ಪಡೆ: ವಿರೋಧ
ಯಲಬುರ್ಗಾ: ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಯಾವ ಕಾರಣಕ್ಕೂ ಗುಲ್ಬರ್ಗ ಹೈಕೋರ್ಟ್ ಪೀಠಕ್ಕೆ ಸೇರಿಸದೆ ಧಾರವಾಡ ಪೀಠದಲ್ಲೇ ಮುಂದುವರೆಸಬೇಕು ಎಂದು ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ನಿಂಗೋಜಿ ಮಾತನಾಡಿ, ಈಗಾಗಲೇ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಧಾರವಾಡ ಹೈಕೋರ್ಟ್ ಪೀಠಕ್ಕೆ ಒಳಪಟ್ಟಿದ್ದು, ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಅನುಕೂಲವಾಗಿದೆ. ಈ ಸರಿಯಾದ ವ್ಯವಸ್ಥೆ ಹೊರತುಪಡಿಸಿ, ನಮಗೆ ಅನುಕೂಲವಲ್ಲದ ಗುಲ್ಬರ್ಗ ಪೀಠಕ್ಕೆ ಯಾವ ಕಾರಣಕ್ಕೂ ಈ ಎರಡು ಜಿಲ್ಲೆಗಳನ್ನು ಸೇರಿಸಕೂಡದು. ಧಾರವಾಡ ಪೀಠದಲ್ಲೇ ಉಳಿಸುವುದು ಎಲ್ಲರ ಹಿತದೃಷ್ಟಿಯಿಂದ ಸೂಕ್ತವಾಗಿದೆ ಎಂದರು. ಹಿರಿಯ ನ್ಯಾಯವಾದಿ ಬಿ.ಎಂ. ಶಿರೂರು, ಸಿ.ಎಚ್. ಪಾಟೀಲ ಮಾತನಾಡಿ, ಎರಡು ಜಿಲ್ಲೆಗಳನ್ನು ಧಾರವಾಡ ಪೀಠದಿಂದ ಗುಲ್ಬರ್ಗ ಪೀಠಕ್ಕೆ ವರ್ಗಾಯಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಕೂಡಲೇ ಸ್ಪಂದಿಸಿ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಧಾರವಾಡ ಪೀಠದಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಸಿ.ವ್ಹಿ. ಮಡಿವಾಳರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಕೀಲರ ಸಂಘದ ಎಸ್. ಬನ್ನಪ್ಪಗೌಡ್ರ, ಯು.ಎಸ್. ಮೆಣಸಗೇರಿ, ಎನ್.ಕೆ. ಜಾಡರ, ಪಿ.ಎಸ್. ಬೇಲೇರಿ, ಎಸ್.ಆರ್. ಬಡಿಗೇರ, ಎಸ್.ಎಸ್. ಹೊಂಬಳ, ಎಸ್.ಎನ್. ಶ್ಯಾಗೋಟಿ, ಮಲ್ಲನಗೌಡ ಪಾಟೀಲ, ಆರ್. ಕೆಂಚಮ್ಮನವರ್, ಆರ್.ಜಿ. ಕುಷ್ಟಗಿ, ಎಸ್.ಜಿ. ಅಂಗಡಿ, ಸುಜಾತಾ ಹಳ್ಳಿ, ಎ.ಎಂ. ಪಾಟೀಲ, ಎಸ್.ಎ. ಮರಿಗೌಡ್ರ, ಎಂ.ಎಂ. ಹಿರೇಮನಿ, ಎಂ.ಎಸ್. ನಾಯ್ಕರ್, ಆನಂದ ಉಳ್ಳಾಗಡ್ಡಿ, ಪ್ರಭುರಾಜ ಕಲಬುರ್ಗಿ, ಪ್ರವೀಣ ಉಳ್ಳಾಗಡ್ಡಿ ಹಾಗೂ ಬಸವಲಿಂಗಪ್ಪ ಭೂತೆ, ಸಂಗಣ್ಣ ಟೆಂಗಿನಕಾಯಿ, ಸಿದ್ದಪ್ಪ ಕಟ್ಟಿಮನಿ, ಜಿ.ಪಿ. ಶೆಟ್ಟರ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com