ಕೊಪ್ಪಳ: ಗ್ರಾನೈಟ್ ಅಕ್ರಮದಲ್ಲಿ ಭಾಗಿಯಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪಿ. ಮುತ್ತಪ್ಪ, ಗ್ರಾಮ ಲೆಕ್ಕಾಧಿಕಾರಿ ಸುಭಾಷ್ ಹಾಗೂ ಕಂದಾಯ ನಿರೀಕ್ಷಕ ಉಮೇಶಗೌಡಗೆ ಜಾಮೀನು ನಿರಾಕರಿಸಿರುವ ಜಿಲ್ಲಾ ನ್ಯಾಯಾಲಯ ಜು. 30ರ ವರೆಗೂ ನ್ಯಾಯಾಂಗ ಬಂಧನಕ್ಕೆ ಸೋಮವಾರ ಆದೇಶಿಸಿದೆ. ಇದರಿಂದ ಅಧಿಕಾರಿಗಳಿಗೆ ಬಿಡುಗಡೆ ಭಾಗ್ಯ ಸಿಗದಂತಾಗಿದೆ. ಕುಕನೂರು ಸುತ್ತಮುತ್ತ ಅಕ್ರಮ ಗ್ರಾನೈಟ್ ನಡೆಸಿದವರಿಗೆ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಹುತೇಕ ಅಧಿಕಾರಿಗಳು ಪರೋಕ್ಷವಾಗಿ ಬೆಂಬಲಿಸುವ ಮೂಲಕ ಸರ್ಕಾರಕ್ಕೆ ದ್ರೋಹ ಬಗೆದ ಆರೋಪದ ಮೇಲೆ ಇವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇವರ ಜಾಮೀನು ವಿಚಾರಣೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆದರೆ, ಕೋರ್ಟ್ ಜಾಮೀನು ನಿರಾಕರಿಸಿ 30ರ ವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.