ಕಾರಟಗಿ: ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬೇಕು ಎಂದು ಕೊಪ್ಪಳ ಲೋಕಸಭೆ ಸದಸ್ಯ ಕರಡಿ ಸಂಗಣ್ಣ ಹೇಳಿದರು. ವಿಶ್ವ ರಕ್ತ ದಿನಾಚರಣೆಯ ಅಂಗವಾಗಿ ಸ್ಥಳೀಯ ಬಸವ ಚೇತನ ಯುವಕ ಸಂಘ ಹಾಗೂ ಬಿಜೆಪಿ ಮುಖಂಡ ಬಸವರಾಜ ದಡೇಸೂಗೂರ ಅವರ ಸಹಯೋಗದಲ್ಲಿ ಭಾನುವಾರ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಕ್ತದ ಗುಂಪು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಿಪಂ ಅಧ್ಯಕ್ಷ ಅಮರೇಶ ಕುಳಗಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕಾವೇರಿ ಶಾವಿ, ಬ.ಚೇ.ಯು. ಸಂಘದ ಅಧ್ಯಕ್ಷ ಶರಣಪ್ಪ ಗದ್ದಿ ಮಾತನಾಡಿದರು. ಸಂಸದ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷ ಅಮರೇಶ ಕುಳಗಿ ಹಾಗೂ ರಕ್ತದಾನ ಮಾಡಿದ ಲಕ್ಷ್ಮೀಕಾಂತ ಗುಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ರಕ್ತ ಪರೀಕ್ಷೆ ನಡೆಸಲಾಯಿತು. ರಕ್ತ ಪರೀಕ್ಷಕರಾದ ಗಿರೀಶ, ಉಮೇಶ, ಖುರೇಶಿ ಸೇರಿದಂತೆ ಇತರರು ರಕ್ತ ಪರಿಕ್ಷೇಯ ನಡೆಸಿದರು. ಜಿಪಂ ಅಧ್ಯಕ್ಷ ಅಮರೇಶ ಕುಳಗಿ, ತಾಪಂ ಸದಸ್ಯ ಹಿರೇಬಸಪ್ಪ ಸಜ್ಜನ, ಟಿ. ಗಂಗಮ್ಮ, ಎಪಿಎಂಸಿ ಅಧ್ಯಕ್ಷ ಶಿವರಡ್ಡಿ ನಾಯಕ, ಗ್ರಾಪಂ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ ಇದ್ದರು.