ಪಠ್ಯಪುಸ್ತಕ, ಸಸಿ ವಿತರಣೆ

Updated on: 

ಗಂಗಾವತಿ: ತಾಲೂಕಿನ ಸುಳೆಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಪಠ್ಯ ಪುಸ್ತಕ, ಸಮವಸ್ತ್ರ ಹಾಗೂ ಸಸಿಗಳ ವಿತರಣೆ ಕಾರ್ಯಕ್ರಮ ಜರುಗಿತು.
ಗ್ರಾಮದ ಶಿವಾನಂದಯ್ಯ ತಾತ ವಿರ್ದ್ಯಾಥಿಗಳಿಗೆ ಸಮವಸ್ತ್ರ ವಿತರಿಸಿ ಸರ್ಕಾರದ ಸೌಲಭ್ಯಗಳನ್ನು ಉಪ ಯೋಗಿಸಿಕೊಂಡು ಶಿಕ್ಷಣದಿಂದ ವಂಚಿತರಾಗದೆ ಗ ುಣಮಟ್ಟದ ಶಿಕ್ಷಣ ಪಡೆಯಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ಭೀಮರೆಡ್ಡಿ ಚೆಕೋಟಿ ಮಾತನಾಡಿ, ಮಕ್ಕಳು ಶಾಲೆ ಸೇರಿದಂತೆ ತಮ್ಮ ತಮ್ಮ ಮನೆಗಳ ಮುಂದೆ ಸಸಿಗಳನ್ನು ನೆಡುವ ಮ ೂಲಕ ಪರಿಸರ ಕಾಪಾಡಬೇಕು. ಮಗುವಿಗೊಂದು ಮರ, ಶಾಲೆಗೊಂದು ವನ ಎನ್ನುವಂತೆ ಮಕ್ಕಳು ಪರಿಸಜ್ಞಾನ ಬೆಳೆಸಿಕೊಳ್ಳಬೇಕೆಂದರು. ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಸಣ್ಣ ಕನಕಪ್ಪ, ಶಿಕ್ಷಕರಾದ ಶಿವನಗೌಡ, ಮೈಲಾರಪ್ಪ, ಶಕುಂತಲಾ, ವನಿತಾ, ಶ್ರುತಿ, ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com