ಕನಕಗಿರಿ: ಇಲ್ಲಿನ ಶ್ರೀಗುರು ರುದ್ರಮುನಿ ಪ್ರೌಢ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.
ಹಿರಿಯ ಆರೋಗ್ಯ ಸಹಾಯಕ ವಾಸಣ್ಣ ಬಿಳೇಗುಡ್ಡ ಮಾತನಾಡಿ, ಜೂನ್ನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ನಿಂತ ನೀರಿನಲ್ಲಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಉತ್ಪತ್ತಿಯಾಗುತ್ತವೆ. ಇವು ಕಚ್ಚುವುದರಿಂದ ಮಲೇರಿಯಾ ಹುಟ್ಟುತ್ತದೆ ಎಂದು ಹೇಳಿದರು.
ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಉಚಿತ ಚಿಕಿತ್ಸೆ ಹಾಗೂ ಅದಕ್ಕೆ ಸಂಬಂದಪಟ್ಟ ಲಸಿಕೆಯ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಿದರು.
ಮುಖ್ಯಶಿಕ್ಷಕ ಮೌನೇಶ ಬಡಿಗೇರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಲ್ಲಿಕಾರ್ಜುನ ಬಾವಿಕಟ್ಟಿ, ಶಿವರೆಡ್ಡಿ, ರಮೇಶ ಎಲಿಗಾರ, ಕರಿಗೌಡ, ಮಹ್ಮದ್ ರಫಿ, ಬಸವರಾಜ್ ಬಿ., ರಮೇಶ, ಶಶಿಕಲಾ, ವಿಜಯಲಕ್ಷ್ಮೀ, ಆರೋಗ್ಯ ಸಹಾಯಕಿಯರಾದ ಶಾಂತಾ, ಜಯಶ್ರೀ ಇದ್ದರು.