ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ಇರಕಲ್ಗಡಾ ರೈತ ಸಂಪರ್ಕ ಕೇಂದ್ರದ ವತಿಯಿಂದ ಭೂಚೇತನ ಯೋಜನೆಯಡಿ ರೈತರಿಗೆ ರೈತ ಕ್ಷೇತ್ರ ಪಾಠ ಶಾಲೆ ಹಮ್ಮಿಕೊಳ್ಳಲಾಗಿತ್ತು. ರೈತರ ಅನುಗಾರ ಹನುಮೇಶ ಉಳ್ಳಾಗಡ್ಡಿ, ರೈತರಿಗೆ ಲಘು ಪೌಷ್ಟಿಕಾಂಶಗಳ ಗಣಿಗಾರಿಕೆ, ಮಣ್ಣಿ ಸವಕಳಿ, ಮಣ್ಣಿನ ಪೌಷ್ಟಿಕಾಂಶ, ಬೀಜೋಪಚಾರದ ಬಗ್ಗೆ ಮಾಹಿತಿ ನೀಡಿದರು. ಜೀವಣ್ಣ ಹುದ್ದಾರ, ಬಸವರಾಜ ಜಿಗಳಿ, ಪಾಲಾಕ್ಷಪ್ಪ ಇಳಗೇರ, ಸೋಮಣ್ಣ ಕಟಗಿಹಳ್ಳಿ, ಬಸವರಾಜ ಮೇಟಿ, ವರ್ಧಮಾನ, ಈರಣ್ಣ ಮುಕ್ಕಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹಾಸಗಲ್: ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ಇರಕಲ್ಗಡಾ ರೈತ ಸಂಪರ್ಕ ಕೇಂದ್ರದ ವತಿಯಿಂದ ರೈತ ಕ್ಷೇತ್ರ ಪಾಠ ಶಾಲೆ ನಡೆಯಿತು. ರೈತರ ಅನುಗಾರ ಹನುಮಂತಪ್ಪ ನಾಯಕ ಅವರು ರೈತರಿಗೆ ಮಣ್ಣು ಮಾದರಿ ಬಗ್ಗೆ ಮಹತ್ವ, ಲಘು ಪೌಷ್ಟಿಕಾಂಶ, ಬೀಜೋಪಾಚಾರದ ಬಗ್ಗೆ ಮಾಹಿತಿ ನೀಡಿದರು. ರೈತರಾದ ಮಾರುದ್ರಯ್ಯ ಹಿರೇಮಠ, ಜಗದೀಶಗೌಡ ಪಾಟೀಲ್, ಮುಕ್ಕಣ್ಣ ಮಂತ್ರಿ, ಬಸವರಾಜ, ನರಸಪ್ಪ ಚನ್ನದಾಸರ, ಬಸವರಾಜ, ಲೆಂಕಪ್ಪ ಹರಿಜನ, ದುರ್ಗಪ್ಪ ನಾಯಕ ಇತರರು ಇದ್ದರು.