ಭಾರತೀನಗರ: ಸಮೀಪದ ದೊಡ್ಡಅರಸಿನಕೆರೆ ಗ್ರಾಪಂ ನೂತನ ಅಧ್ಯಕ್ಷರಾಗಿ ಡಿ.ಸಿ. ತಮ್ಮಣ್ಣ ಬೆಂಬಲಿತ ಅಭ್ಯರ್ಥಿ ಸುಮತಿಯೋಗೇಶ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಪುಟ್ಟಯ್ಯ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಗ್ರಾಮವನ್ನು ಮಾದರಿಯನ್ನಾಗಿಸಲು ಸದಸ್ಯರು ಶ್ರಮಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸದಸ್ಯರಾದ ಅನಿತಾ, ಪ್ರಕಾಶ್, ಮುಖಂಡರಾದ ವಿಎಸ್ಎಸ್ಬಿಎನ್ ಅಧ್ಯಕ್ಷ ಮಂಚೇಗೌಡ, ಜಿ.ಟಿ. ರವೀಂದ್ರಕುಮಾರ್, ಅಮರ್, ರಾಮಕೃಷ್ಣ ಸೇರಿದಂತೆ ಇತರರು ಇದ್ದರು.