ವಿದ್ಯಾರ್ಥಿಗಳಿಗೆ ಅಭಿನಂದನೆ

Updated on: 

ಭಾರತೀನಗರ: ಗ್ರಾಮೀಣ ಮಕ್ಕಳು ಖೋಖೋ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ವಿಜೇತರಾಗಿರುವುದು ಹೆಮ್ಮೆಪಡಬೇಕಾದ ವಿಷಯ ಎಂದು ಜಿಪಂ ಸದಸ್ಯೆ ಲಲಿತಾಪ್ರಕಾಶ್ ತಿಳಿಸಿದರು. ಸಮೀಪದ ಕೊಕ್ಕರೇಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಯಾವುದಕ್ಕೂ ಕಡಿಮೆಯಿಲ್ಲವೆಂಬಂತೆ ಈ ಶಾಲೆಯ ವಿದ್ಯಾಥಿಗಳು ತೋರಿಸಿಕೊಟ್ಟಿದ್ದಾರೆ. ಗ್ರಾಮೀಣ ಮಕ್ಕಳು ಕೀಳರಿಮೆ ಬಿಟ್ಟು ವಿದ್ಯಾಭ್ಯಾಸದಲ್ಲಿ ತೊಡಗಬೇಕಂದು ನೀಡಿದರು. ಇಸಿಒ ಸುಶೀಲಮ್ಮ, ತಾಪಂ ಸದಸ್ಯೆ ಬೋರಮ್ಮಕುಳ್ಳಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ. ಕೃಷ್ಣ, ಜ್ಯೋತಿ ಕೆಂಪರಾಜು, ಗ್ರಾಪಂ ಅಧ್ಯಕ್ಷೆ ಶಶಿರೇಖಾ, ಉಪಾಧ್ಯಕ್ಷ ಸಿದ್ದಯ್ಯ, ಮುಖ್ಯ ಶಿಕ್ಷಕ ಎಚ್.ಸಿ. ದೇವೇಗೌಡ, ಬಿ.ಕೆ. ಚನ್ನಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗಯ್ಯ, ಬಾಲಸುಬ್ರಹ್ಮಣ್ಯ, ತೊರೆಚಾಕನಹಳ್ಳಿ ಶಂಕರೇಗೌಡ, ಆತ್ಮಾನಂದ, ತೈಲೂರು ಸಿದ್ದರಾಜು ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com