ಮದ್ದೂರು: ನಿಜಗುಣ ಅಂಬಿಗರ ಚೌಡಯ್ಯ ಅವರ ವಚನಗಳ ಮಹತ್ವ ಕುರಿತು ಸಂಶೋಧನೆ ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್ ಎಂ.ಕೆ.ಸವಿತಾ ಶ್ರೀನಿವಾಸ್ ಅಬಿಪ್ರಾಯಪಟ್ಟಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ನಡೆದ ನಿಜಗುಣ ಅಂಬಿಗರ ಚೌಡಯ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಉನ್ನತ ವಿಚಾರಗಳನ್ನು ಹೊಂದಿದ್ದ ಶ್ರೇಷ್ಠ ಅನುಭವಿ ಹಾಗೂ ನಿಷ್ಠೂರವಾದಿ ಶರಣ ಅಂಬಿಗರ ಚೌಡಯ್ಯ ಸಾಮಾಜಿಕ ಚಿಂತನೆ ಕುರಿತು ರಚಿಸಿರುವ ವಚನಗಳಲ್ಲಿ ಹೊಂದಿರುವಷ್ಟು ಮುಖ್ಯ ವಚನಕಾರರಲ್ಲಿ ಇಲ್ಲವಾಗಿದೆ ಎಂದರು.ತಾಪಂ ಸದಸ್ಯ ಎಚ್.ಜಿ.ರಾಮಚಂದ್ರ, ಕಸಾಪ ಅಧ್ಯಕ್ಷ ಅಪೂರ್ವಚಂದ್ರ, ಡಿ.ಪಿ.ಶಿವಪ್ಪ ಮಾತನಾಡಿದರು. ಗಂಗಾಮತಸ್ಥ ಸಂಘದ ತಾಲೂಕು ಅಧ್ಯಕ್ಷ ವಾಸು ಅಧ್ಯಕ್ಷತೆ ವಹಿಸಿದ್ದರು.
ದ್ವಿತೀಯ ದರ್ಜೆ ತಹಸೀಲ್ದಾರ್ ಎಂ.ರಾಮಪ್ಪ, ತಾಪಂ ಸದಸ್ಯ ಚೌಡಮ್ಮ, ಮಾಜಿ ಪುರಸಭೆ ಸದಸ್ಯ ಬಿ.ಕೃಷ್ಣ ಮತ್ತಿತರರು ಇದ್ದರು.