ಮಂಡ್ಯ: ವಚನಕಾರರಲ್ಲಿ ಕ್ರಾಂತಿ ಪುರುಷನಾಗಿರುವ ಅಂಬಿಗರ ಚೌಡಯ್ಯ 12ನೇ ಶತಮಾನದ ಅನರ್ಘ್ಯ ರತ್ನ ಎಂದು ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ಸೋಮವಾರ ಹೇಳಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ವಚನಕಾರರ ಪೈಕಿ ಜಾತಿ ಮೀರಿ ನಿಂತ ವಚನಕಾರ ಎಂದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ನಿಜವಾದ ಪೂಜೆ ಎಂಬುದು ಚೌಡಯ್ಯರ ವಾದವಾಗಿತ್ತು ಎಂದು ಹೆಬ್ರಿ ಹೇಳಿದರು.
ಶಾಸಕ ಎಂ. ಶ್ರೀನಿವಾಸ್, ಮುಡಾ ಅಧ್ಯಕ್ಷ ಬಸವೇಗೌಡ ಮಾತನಾಡಿದರು. ಜಿಲ್ಲಾಧಿಕಾರಿ ಕೃಷ್ಣಯ್ಯ, ಹಾಡ್ಯ ಉಮೇಶ್, ಮೀರಾ ಶಿವಲಿಂಗಯ್ಯ, ಅರುಣ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.