ಆದಿಶ್ರೀ ಕೊಡುಗೆ ಅಪಾರ: ಆತ್ಮಾನಂದ

Updated on: 

ಮಳವಳ್ಳಿ: ಶಿವೈಕ್ಯರಾದ ಬಾಲಗಂಗಾಧರನಾಥ ಸ್ವಾಮೀಜಿಯವರ ಕೊಡುಗೆ ಅಪಾರ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ ತಿಳಿಸಿದರು.
ಅವರು ಪಟ್ಟಣದ ಕ್ಯಾತೇಗೌಡನ ದೊಡ್ಡಿ ಗ್ರಾಮಸ್ಥರು ಹಾಗೂ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ರೈತ ಮತ್ತು ಕೃಷಿ ಕಾರ್ಮಿಕ ವಿಭಾಗದ ಅದ್ಯಕ್ಷ ನಾಗೇಗೌಡ ಆಯೋಜಿಸಿದ್ದ ಶ್ರೀಗಳ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅತಿ ಕಡಿಮೆ ವಯಸ್ಸಿನಲ್ಲಿಯೇ ದೇಶದುದ್ದಗಲಕ್ಕೂ ವಿವಿಧ ಕೇತ್ರಗಳಲ್ಲಿ ಅದರಲ್ಲೂ ಶಿಕ್ಷಣ, ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಬಡವರು ವಿದ್ಯಾಭ್ಯಾಸ ಮಾಡುವಂತೆ ಕಾಯಕಲ್ಪ ರೂಪಿಸಿದ ಮಹಾನ್ ಚೇತನವನ್ನ ನಾವಿಂದು ಕಳೆದುಕೊಂಡಿದ್ದೇವೆ.
 ಆದರೂ ಅವರು ಹಾಕಿಕೊಟ್ಟಿರುವ ದಾರಿ ನೋಡಿದರೆ ಶ್ರೀಕ್ಷೇತ್ರದಲ್ಲಿ ಕಾಲಭೈರವನ ಸನ್ನಿದಾನದಲ್ಲಿ ಸಂಸ್ಕೃತ ವೇದ-ಉಪನಿಷತ್‌ಗಳನ್ನು ಮಕ್ಕಳಿಗೆ ಪಠಣ ಮಾಡಿಸಿ ಯುವ ಪೀಳಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಕಾರ್ಯತಂತ್ರ ರೂಪಿಸಿದ್ದಾರೆಂದು ವಿವರಿಸಿದರು.
ಕಾರ್ಯಕ್ರಮವನ್ನು ಮೈಸೂರಿನ ಬಸವ ಜ್ಞಾನ ಮಂದಿರದ ಅಧ್ಯಕ್ಷೆ ಶ್ರೀಮಾಕ ಬಸವಾಂಜಲಿ ಉದ್ಘಾಟಿಸಿದುರು. ವೇದಿಕೆಯಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಡಾ. ಮೂರ್ತಿ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಿಸಾನ್ ಮಜ್ದೂರ್ ಅಧ್ಯಕ್ಷ ಸುದರ್ಶನ್, ನಿಡಗಟ್ಟ ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ ಶ್ರೀಗಳ ಕುರಿತು ಮಾತನಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com