ಜನಾಭಿಪ್ರಾಯ ಸಂಗ್ರಹಿಸಿದ ತಮ್ಮಣ್ಣ

Updated on: 

ಭಾರತೀನಗರ: ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರು ಬುಧವಾರ ಚಿಕ್ಕಅರಸಿನಕೆರೆ ಹೋಬಳಿ ವ್ಯಾಪ್ತಿಯ ವಿವಿಧೆಡೆ ಜನಾಭಿಪ್ರಾಯ ಸಂಗ್ರಹಿಸಿದರು.
ತಮ್ಮ ರಾಜಕೀಯ ಹೆಜ್ಜೆಗಳ ಕುರಿತು ಗ್ರಾಮೀಣ ಜನರೊಂದಿಗೆ ಸಂವಾದ ನಡೆಸಿದ ಅವರು ಚಿಕ್ಕಅರಸಿನಕೆರೆ, ಗುರುದೇವರಹಳ್ಳಿ, ಹುಣ್ಣನದೊಡ್ಡಿ, ಛತ್ರದಹೊಸಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಂಚರಿಸಿದಾಗ ಅಭಿಮಾನಿಗಳು ಸ್ವಾಗಸಿದರು.
ಛತ್ರದ ಹೊಸಹಳ್ಳಿ ಗ್ರಾಮದಲ್ಲಿ ತಮ್ಮಣ್ಣ ಅವರು ನೂತನವಾಗಿ ನಿರ್ಮಿಸುತ್ತಿರುವ ಬಸವೇಶ್ವರ ದೇವಾಲಯ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿ, ಭರವಸೆ ನೀಡಿ ಮಾತಿಗೆ ತಪ್ಪುವ ಜಾಯಮಾನ ನನ್ನದಲ್ಲ. ನಾನು ಕ್ಷೇತ್ರದ ಶಾಸಕನಾಗಿದ್ದ ವೇಳೆಯಲ್ಲಿ ಕಿರುಗಾವಲು ಕ್ಷೇತ್ರಕ್ಕೆ 450 ಕೋಟಿ, ಮದ್ದೂರು ಕ್ಷೇತ್ರಕ್ಕೆ 400ಕೋಟಿ ಅಭಿವೃದ್ಧಿ ಕೆಲಸ ಕೈಗೊಂಡಿದೆ.
 ಅದರಲ್ಲಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಂಡ ಮೇಲೆ ನಂತರ ಬಂದ ಶಾಸಕರು ಅಭಿವೃದ್ಧಿಪಡಿಸಲಿಲ್ಲ. ಆದ್ದರಿಂದ ಏತ ನೀರಾವರು ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷದಿಂದಲೂ ಟಿಕೆಟ್ ನೀಡಲು ಆಹ್ವಾನ ಬರುತ್ತಿವೆ. ಜನರ ಮತ್ತು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನಾನು ಯಾವ ಪಕ್ಷಕ್ಕೆ ಹೋಗಬೇಕೆಂಬುದನ್ನು ಚಿಂತಿಸುತ್ತಿದ್ದೇನೆ ಎಂದರು.
ಡೈರಿ ಕೆಂಪಣ್ಣ, ಎಚ್.ಎಂ. ಜೋಗಯ್ಯ, ಕುಮಾರ್ ಹೆಗ್ಡೆ, ಮದ್ದೂರು ಹೆಗ್ಡೆ, ಜಿಪಂ ಮಾಜಿ ಸದಸ್ಯ ಕುಮಾರರಾಮು, ತಾಪಂ ಸದಸ್ಯ ಎನ್.ಸಿ.ಪುಟ್ಟಸ್ವಾಮಿಗೌಡ, ಎಪಿಎಂಸಿ ನಿರ್ದೇಶಕ ವಿಜಯಕುಮಾರ್, ಮುಖಂಡರಾದ ಸೇಟು ಸಿದ್ದೇಗೌಡ, ಎಂ.ಪಿ. ರಾಜಣ್ಣ, ಕೆ.ಎಲ್. ಶಿವರಾಂ, ಕೆ.ಟಿ. ಸುರೇಶ್, ಡಿ.ಎ. ಕೆರೆ ಮಂಚೇಗೌಡ ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com