ಶ್ರೀರಂಗಪಟ್ಟಣ: ಪಟ್ಟಣದ ಪದವಿ ಕಾಲೇಜು ಆವರಣದಲ್ಲಿ ಕಸಾಪ ವತಿಯಿಂದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅಂಗವಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಚರ್ಚಾ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಸಂಜಯ್ಕುಮಾರ್, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣ ಗುಣಾತ್ಮಕವಾಗಿತ್ತು. ಸಹೋದರಿಯರೆ ಎಂದು ಅವರು ಪ್ರಥಮವಾಗಿ ಬೋಧಿಸಿದ ಮಂತ್ರದ ಮಾತಾಗಿತ್ತು. ಅವರು ಮಾತನಾಡಿದ ಭಾವಪೂರ್ಣ ಭಾಷಣವನ್ನು ಲಕ್ಷಾಂತರ ಮಂದಿ ಆಲಿಸಿದ್ದರು ಎಂದು ತಿಳಿಸಿದರು.
ತಾಲೂಕಿನ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಗೌರಮ್ಮ, ಪ್ರೊ.ಜ್ಞಾನದೇವ, ಪ್ರೊ. ನಾಗಭೂಷಣ, ಕರವೇ ಬಸವರಾಜು, ಪುಟ್ಟರಾಮು, ಚಂದ್ರಶೇಖರ್ ಹಾಗೂ ಕಸಾಪ ಅಧ್ಯಕ್ಷ ಪುರುಷೋತ್ತಮ ಉಪಸ್ಥಿತರಿದ್ದರು.