ಎಚ್.ಡಿ. ಕೋಟೆ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ 2012-13ನೇ ಸಾಲಿನ ಎಚ್.ಡಿ. ಕೋಟೆ ತಾಲೂಕು ಯುವಜನ ಮೇಳವನ್ನು ಜ.28 ರಂದು ಪಟ್ಟಣದ ಶಿಕ್ಷಣ ಇಲಾಖೆಯ ಗುರುಭವನದಲ್ಲಿ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 9ಕ್ಕೆ ಭಾವಗೀತೆ, ಗೀಗೀ ಪದಗಳು, ಲಾವಣಿ, ಕೋಲಾಟ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಸೋಬಾನೆ ಪದ, ಭಜನೆ, ಯಕ್ಷಗಾನ, ಚರ್ಮವಾದ್ಯ ಮೇಳ, ಏಕಪಾತ್ರಾಭಿನಯ, ವೀರಗಾಸೆ ಕುಣಿತ, ಜೋಳ- ರಾಗಿ ಬೀಸುವ ಪದ, ಜನಪದ ಗೀತೆ, ದೊಡ್ಡಾಟ, ಸಣ್ಣಾಟಗಳ ಸ್ಪರ್ಧೆಗಳು ಯುವಕ- ಯುವತಿಯರಿಗೆ ಪ್ರತ್ಯೇಕವಾಗಿ ನಡೆಯಲಿವೆ.
15 ರಿಂದ 35 ವರ್ಷ ವಯೋವುಯೊಳಗಿನ ಯುವಕ- ಯುವತಿಯರು ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಜಿಲ್ಲಾ ಯುವಜನ ಮತ್ತು ಕ್ರೀಡಾ ಮಂಡಳಿಗಳಿಗೆ ನೋಂದಾವಣಿಯಾದ ಯುವಕ ಸಂಘ, ಯುವತಿ ಮಂಡಳಿಗಳು, ರಾಜೀವ್‌ಗಾಂಧಿ ಸಂಘಗಳ ಪದಾಧಿಕಾರಿಗಳು ಭಾಗವಹಿಸಬಹುದು. ಆಸಕ್ತರು ದೂ. 0821- 2564179, ಎಚ್.ಡಿ. ಕೋಟೆಯ ಸಹ ಶಿಕ್ಷಕ ನಿಂಗರಾಜು (99803 07727), ಮಂಜು (95359 99233), ಗಣೇಶ್ (99452 43716) ಸಂಪರ್ಕಿಸಬಹುದು.