ಶ್ರೀರಂಗಪಟ್ಟಣ: ಪಟ್ಟಣದ ಪ್ರವಾಸಿ ತಾಣಗಳಿಗೆ ವಿಶ್ವಸಂಸ್ಥೆ ಮಟ್ಟದ ಅಂತಾರಾಷ್ಟ್ರೀಯ ನ್ಯಾಯಾಧೀಶರಾದ ಕ್ರಿಸ್ಟಲ್ ಗ್ರೀನ್ ಉಡ್ ಭೇಟಿ ನೀಡಿದ್ದರು.
ತಮ್ಮ ಪತ್ನಿಯೊಂದಿಗೆ ಟಿಪ್ಪು ಬೇಸಿಗೆ ಅರಮನೆ, ದರಿಯಾ ದೌಲತ್‌ಗೆ ಭೇಟಿ ನೀಡಿ ಟಿಪ್ಪುವಿನ ಬಗೆಗಿನ ವಿನ್ಯಾಸಗಳ ಪೋಟೋಗಳನ್ನು ವೀಕ್ಷಿಸಿದರು.
ಬ್ರಿಟಿಷರ ವಿರುದ್ದ ಯುದ್ಧ ಮಾಡುತ್ತಿರುವ ಗೋಡೆ ಬರಹದ ಚಿತ್ರಗಳನ್ನು ನೋಡಿದರು. ತನ್ನ ಮಕ್ಕಳನ್ನು ಒತ್ತೆಯಾಳುಗಳನ್ನಾಗಿಸಿದ ಚಿತ್ರಗಳ ಭಂಗಿಯನ್ನು ವೀಕ್ಷಿಸಿ ಗೈಡ್ ಅವರಿಂದ ಮಾಹಿತಿಯನ್ನು ಪಡೆದರು.
ನಂತರ ಗುಂಬಸ್, ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸ ಮಾಡಿದರು. ತಹಶೀಲ್ದಾರ್ ಅರುಳ್ ಕುಮಾರ್, ಆರ್.ಐ ಶಿವರಾಜು ಸೇರಿದಂತೆ ರಾಜ್ಯಪಾಲರ ಕಚೇರಿಯವರು ಜತೆಯಲ್ಲಿದ್ದರು.\