ಆದಿಶ್ರೀ ದೇಶ ಕಂಡ ಅಪರೂಪದ ಸಂತ

Updated on: 



ಆದಿಚುಂಚನಗಿರಿ / ಮಂಡ್ಯ
:ಆದಿಚುಂಚನಗಿರಿಯ ಶಿವೈಕ್ಯ ಜಗದ್ಗುರು ಡಾ. ಬಾಲಗಂಗಾಧರನಾಥ ಶ್ರೀಗಳು ಮಹಾನ್ ಸಂತ, ಮಹರ್ಷಿ, ದೇಶದ ಋಷಿ ಪರಂಪರೆ ಮತ್ತು ಸಂಸ್ಕೃತಿಯ ಗೌರವ ಇಮ್ಮಡಿಯಾಗಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹರಿದ್ವಾರದ ಪತಂಜಲಿ ಯೋಗಗುರು ಬಾಬಾ ರಾಮ್‌ದೇವ್ ಸೋಮವಾರ ಮುಕ್ತಕಂಠದಿಂದ ಪ್ರಶಂಸಿಸಿದರು.
ಆದಿಚುಂಚನಗಿರಿಯ ಕ್ರೀಡಾಂಗಣದಲ್ಲಿ ಡಾ. ಬಾಲಗಂಗಾಧರನಾಥ ಶ್ರೀಗಳ 2 ದಿನಗಳ ಕಾಲ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಂತ ಸಂಗಮ ಉದ್ಘಾಟಿಸಿ ಮಾತನಾಡಿದ ಬಾಬಾ ರಾಮ್‌ದೇವ್, ಬಾಲಗಂಗಾಧರನಾಥ ಶ್ರೀಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ. ಪತಂಜಲಿ ಮತ್ತು ಚುಂಚನಗಿರಿಯ ಉದ್ದೇಶ ಮತ್ತು ಧ್ಯೇಯಗಳು ಒಂದೇ ಆಗಿರುವುದರಿಂದ  ಶ್ರೀಗಳು ನಮಗೆ ಅತ್ಯಂತ ಸನಿಹದಲ್ಲಿದ್ದಾರೆ ಎಂದರು.
ಸನ್ಯಾಸ ಪರಂಪರೆ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಭೂಮಿಯಲ್ಲಿ ಪ್ರತ್ಯಕ್ಷವಾಗಿ ದೇವರನ್ನು ಕಾಣದೇ ಹೋದರೂ ಶ್ರೀಗಳಂತಹ ಋಷಿಗಳು, ಸಂತರನ್ನು ನಾವು ದೇಶದೆಲ್ಲೆಡೆ ಕಾಣಬಹುದು. ಹೀಗಾಗಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಧರ್ಮ ಎಂಬುದು ಭಾರತದ ಪವಿತ್ರ ಭೂಮಿಯಲ್ಲಿ ಸಮೃದ್ಧಿಯಾಗಿದೆ ಎಂದು ಹೇಳಿದರು.
ಉತ್ತರ ಭಾರತದ ಸಂತರಿಗೂ, ಋಷಿಗಳಿಗೂ, ದಕ್ಷಿಣ ಭಾರತದ ಸಂತ ಋಷಿಗಳು ತುಂಬಾ ವ್ಯತ್ಯಾಸವಿದೆ. ಉತ್ತರ ಭಾರತದ ಋಷಿಗಳು, ಸಂತರು ಊಟ ಮತ್ತು ಪೂಜೆಗೆ ಮಾತ್ರ ಆದ್ಯತೆ ನೀಡುತ್ತಾರೆ. ಆದರೆ, ಚುಂಚನಗಿರಿ ಶ್ರೀಗಳು ಜನರೇ ದೇವರೆಂದು ಭಾವಿಸಿ ಪೂಜೆ ಮಾಡುತ್ತಾರೆ. ಧರ್ಮದ ಪ್ರತಿಷ್ಠಾಪನೆ ಮಾಡುತ್ತಾರೆ. ಮಾನವತವಾದವನ್ನು ಜನರಲ್ಲಿ ಬಿತ್ತುತ್ತಾರೆ. ಇಂತಹ ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com