ಶ್ರೀರಂಗಪಟ್ಟಣ: ಬೆಳಗೊಳ ಗ್ರಾಮಸ್ಥರು ಬಾಲಗಂಗಾಧರನಾಥ ಸ್ವಾಮೀಜಿಯವರ ಪುಣ್ಯಾರಾಧನಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ನೆರವೇರಿಸಿದರು.
ಕೆಆರ್ಎಸ್ ಮತ್ತು ಮೈಸೂರು ಮಾರ್ಗದ ಮುಖ್ಯ ರಸ್ತೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಬೃಹತ್ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ಸಿಂಗಾರ ಮಾಡಿದ್ದರು. ಸಂಪ್ರದಾಯದಂತೆ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಕೇಶ ಮುಂಡನೆ ಮಾಡಿಸಿಕೊಂಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ಸ್ವಾಮೀಜಿಯವರ ಭಾವಚಿತ್ರದ ಎದುರು ಊಟ ಬಡಿಸಿ ಶಾಂತಿ ಮಾಡಿಸಿದರು. ಅಕ್ಕ- ಪಕ್ಕದ ಗ್ರಾಮಗಳಿಂದ ಬಂದಿರುವ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ ಸ್ವಾಮೀಜಿಯವರ ಆತ್ಮಕ್ಕೆ ಶಾಂತಿ ಕೋರಿದರು.
ಗ್ರಾಮದ ದೊಡ್ಡ ಯಜಮಾನರಾದ ಶ್ರೀನಿವಾಸ್, ಚಿಕ್ಕ ಯಜಮಾನರಾದ ವಿಷಕಂಠೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ ಸುರೇಶ, ಸದಸ್ಯರಾದ ಹರೀಶ್, ಶಶಿಕುಮಾರ್, ಬಲಮುರಿ ರವಿ, ಮಂಜುನಾಥ, ಉಮೇಶ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.