ಭಾರತೀನಗರ: ಸಮೀಪದ ಯಡಗನಹಳ್ಳಿ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಬ್ಬನಹಳ್ಳಿ ಪುಟ್ಟಚಾರಿ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಿಂಗಮ್ಮ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮಾಜಿ ಅಧ್ಯಕ್ಷ ಎಂ. ಮಂಚೇಗೌಡ, ಹೊನ್ನೇಗೌಡ, ಗುತ್ತಿಗೆದಾರ್ ಶಿವಲಿಂಗೇಗೌಡ, ಎಸ್.ಎಂ. ಸುರೇಶ್, ಕೆ.ಸಿ. ಪ್ರಕಾಶ್, ಜವನೇಗೌಡ, ಪುಟ್ಟಸ್ವಾಮಿಗೌಡ, ಮಂಚೇಗೌಡ ಸೇರಿದಂತೆ ಸದಸ್ಯರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.