ಫೆ. 6ರಿಂದ ಸುತ್ತೂರು ಜಾತ್ರಾ ಮಹೋತ್ಸವ

Updated on: 

ಪಾಂಡವಪುರ: ಶಿವರಾತ್ರೀಶ್ವರ ಶಿವಯೋಗಿ ಜಾತ್ರಾ ಮಹೋತ್ಸವನ್ನು ಫೆ. 6 ರ ಬುಧವಾದರಿಂದ ಫೆ.11ರ ಸೋಮವಾರವರೆಗೆ ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ 46ನೇ ದನಗಳ ಜಾತ್ರೆ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಾತ್ರೆ ಸಮಿತಿಯ ಸಂಚಾಲಕ ಎಸ್.ಎ. ಮಲ್ಲೇಶ್ ತಿಳಿಸಿದ್ದಾರೆ.
ಪಾಂಡವಪುರ ಪಟ್ಟಣ ಪಂಚಾಯಿತಿ ಅವರಣದಲ್ಲಿ ಜಾತ್ರಾ ಮಹೋತ್ಸವ 46 ನೇ ದನಗಳ ಜಾತ್ರೆಯ ಬಗ್ಗೆ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಭಾಗವಹಿಸುತ್ತಿರುವುದರಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ನಂತರ ಮಾತನಾಡಿದರು.
ಪ್ರತಿವರ್ಷವು ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆಗೆ ಮಂಡ್ಯ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ರಾಸುಗಳು ಭಾಗವಹಿಸುತ್ತವೆ. ಇದು ನಿಜಕ್ಕೂ ಸಂತಸದ ವಿಚಾರ ಎಂದರು.  ಜಾತ್ರೆಯ ಸಂದರ್ಭದಲ್ಲಿ ರೈತರು, ಜಾನುವಾರು ಕೊಂಡುಕೊಳ್ಳಲು ಹಾಗೂ ಮಾರಲು ಅವಕಾಶವಿರುತ್ತದೆ. ಜಾತ್ರೆಗೆ ಬರುವ ರಾಸುಗಳಿಗೆ ತಗುಲುವ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿರುತ್ತದೆ. ರಾಸುಗಳ ಮಾಲೀಕರು ತಮ್ಮ ರಾಸುಗಳನ್ನು ಕಟ್ಟುವ ಸ್ಥಳವನ್ನು ಮುಂಚಿತವಾಗಿ ನೋಂದಾಯಿಸಿ ಕಾಯ್ದಿರಿಸಿಕೊಳ್ಳಬಹುದಾಗಿದೆ. ಜಾತ್ರೆಗೆ ಬರುವ ದನಗಳಿಗೆ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಮಾಡಲಾಗುವುದು ಎಂದರು.
ಬಹುಮಾನ ನೀಡುವಾಗ ತಜ್ಞರ ಅಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಫೆ. 7ರ ಸಂಜೆವರೆಗೆ ರಾಸುಗಳು ಜಮಾಯಿಸುವುದು ರಥೋತ್ಸವ ದಿನದಂದು ಅಂದರೆ ಫೆ. 8 ರಂದು ಬೆಳಗ್ಗೆಯಿಂದ ಸಂಜೆವರೆಗೆ ರಾಸುಗಳ ನೋಂದಣಿ ಕಾರ್ಯ ನಡೆಯುತ್ತದೆ. ನಂತರ ಬರುವ ರಾಸುಗಳನ್ನು ಅಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂದರು.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಥೋತ್ಸವ, ಮಹದೇಶ್ವರ ಉತ್ಸವ ಹಾಗೂ ಕೊಂಡೊತ್ಸವ, ತೆಪ್ಪೋತ್ಸವ ಮೊದಲಾದ ಧಾರ್ಮಿಕ ಉತ್ಸವಗಳೊಂದಿಗೆ ಸಾಮೂಹಿಕ ವಿವಾಹಗಳು ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಅಗಮಿಸುವ ಭಕ್ತಾದಿಗಳಿಗೆ ಪ್ರತಿದಿನವೂ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ವೈ.ಪಿ. ಮಹದೇವಪ್ಪ, ಸದಸ್ಯರಾದ ಎಚ್. ಶಂಕರಪ್ಪ, ಎಸ್.ಎಂ. ಶಿವನಂಜಪ್ಪ, ಜಿ.ಮರಳಿ ಮಹದೇವಪ್ಪ, ಟಿ.ಸಿ. ಮಹದೇವಪ್ಪ, ಎಚ್. ಎನ್. ನಂಜಪ್ಪ, ಎಸ್. ಶಿವಣ್ಣ, ಪಾಂಡವಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ಮಾಯಮ್ಮ, ಶಿವಕುಮಾರ್, ಹಿರೇಮರಳಿ ನಿಂಗೇಗೌಡ, ಶಿವರುದ್ರಪ್ಪ ರಾಜಣ್ಣ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com