ಚಾಮುಂಡೇಶ್ವರಿ ಕಾರ್ಖಾನೆಗೆ ಬೀಗ

Updated on: 

ಭಾರತೀನಗರ: ಕಾರ್ಖಾನೆಗೆ ಕಬ್ಬು ಒಡೆದು 2 ತಿಂಗಳಾದರೂ ಹಣ ಪಾವತಿಯಾಗದಿರುವುದನ್ನು ಖಂಡಿಸಿ ದೊಡ್ಡರಸಿನಕೆರೆ, ಅಣ್ಣೂರು, ಬೊಪ್ಪಸಮುದ್ರ, ನೆಲಮಾಕನಹಳ್ಳಿ, ಕ್ಯಾತಘಟ್ಟ, ಗುರುದೇವಹಳ್ಳಿ, ಹಾಗಲಹಳ್ಳಿ, ಮೆಣಸಗೆರೆ, ಮಠದದೊಡ್ಡಿ, ಅಜ್ಜಹಳ್ಳಿ ಸೇರಿದಂತೆ ಇತರೆ ಗ್ರಾಮದ ನೂರಾರು ರೈತರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕೇನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ರೈತರು ಸಾಲಸೋಲ ಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿ 2-3 ತಿಂಗಳಾದರೂ ಕಾರ್ಖಾನೆ ಅಧಿಕಾರಿಗಳು ಹಣಪಾವತಿ ಮಾಡಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
 ಈಗಾಗಲೇ ರೈತರು ಬ್ಯಾಂಕ್‌ಗಳಿಂದ ಸಾಲ ಪಡೆದಿರುವುದಕ್ಕೆ ಬಡ್ಡಿ ಕಟ್ಟಲು ಹಣವಿಲ್ಲದೆ ಪರಿತಪಿಸುತ್ತಿರುವುದು ಒಂದು ಕಡೆಯಾದರೆ ಚಿನ್ನದ ಒಡವೆಗಳನ್ನು ಗಿರವಿ ಇಡುತ್ತಿರುವುದು ಇನ್ನೊಂದೆಡೆ ನಿರಂತರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಬ್ಬು ಒಡೆದ 25ದಿನಗಳಲ್ಲಿ ಹಣಪಾವತಿ ಮಾಡಬೇಕಾಗಿದ್ದರೂ ತಿಂಗಳಾದರೂ ಹಣನೀಡದಿರುವುದು ಸರಿಯಲ್ಲ ಕೂಡಲೇ ರೈತರು ನೀಡಬೇಕಾಗಿರುವ ಕಬ್ಬು ಒಡೆದ ಹಣ ಹಾಗೂ ಬಾಕಿ ಹಣವನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಕೇನ್ ಜನರಲ್ ಮ್ಯಾನೆಜರ್ ನಾಗರಾಜು ಮಾತನಾಡಿ, ನೀರಿಲ್ಲದೆ ಒಣಗುತ್ತಿರುವ ಕಬ್ಬುಗಳನ್ನು ಈಗಾಗಲೇ ಅರೆಯಲು ಅನುಮತಿ ನೀಡಲಾಗುತ್ತಿದೆ. ಇನ್ನೆರೆಡು ತಿಂಗಳು ಕಾರ್ಖಾನೆ ಕಬ್ಬುನ್ನು ಅರೆಯುವುದರಿಂದ ರೈತರಿಗೆ ನೀಡಲಾಗುತ್ತಿದೆ. ಇನ್ನೆರಡು ತಿಂಗಳು ಕಾರ್ಖಾನೆ ಕಬ್ಬುನ್ನು  ಅರೆಯುವುದರಿಂದ ರೈತರಿಗೆ  ನೀಡಬೇಕಾದ ಹಣವನ್ನು ಹಂತ-ಹಂತವಾಗಿ ನೀಡಲಾಗುವುದು ಎಂದರು.
ಸಕ್ಕರೆ ಬೆಲೆ ಕಡಿಮೆಯಾದ ಕಾರಣ ಸರಿಯಾದ ಕಾರಣ ಸರಿಯಾದ ಸಮಯಕ್ಕೆ ಹಣ ಪಾವತಿಮಾಡಲು ಸಾಧ್ಯವಾಗಿಲ್ಲ. ಈಗಾಗಲೇ 15 ಬ್ಯಾಚ್‌ಗಳಿಗೆ ಹಣ ನೀಡಲಾಗಿದೆ. ಉಳಿಕ 9ಬ್ಯಾಚ್‌ಗಳಿಗೆ ಹಣ ನೀಡಬೇಕಾಗಿದೆ ರೈತರು ಸಹಕರಿಸಬೇತೆಂದು ಮನವಿ ಮಾಡಿದರು.
ಹಾಗಲಹಳ್ಳಿ ಪ್ರಕಾಶ್, ನಾಗ ರಾಜು, ಅಜ್ಜಹಳ್ಳಿ ರಾಜೇಶ್, ಕರಿಯಪ್ಪ, ಕ್ಯಾತಘಟ್ಟದ ರಾಜಣ್ಣ, ಮುಟ್ಟನಹಳ್ಳಿ ಸಿದ್ದೇಗೌಡ, ಬೊಪ್ಪಸಮುದ್ರದ ನಾಗರಾಜು, ಪ್ರತಾಪ್, ಮೆಳ್ಳಹಳ್ಳಿ ತಮ್ಮಣ್ಣ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com