ಕನ್ನಡಪ್ರಭ ವಾರ್ತೆ ಮಂಡ್ಯ ಮಾ.29
ಚಲನಚಿತ್ರ ಹಾಗೂ ಮಾಧ್ಯಮಗಳ ಹಾವಳಿಯಿಂದ ನಾಟಕ, ರಂಗಭೂಮಿ ಕಲೆಗಳು ನಶಿಸುತ್ತಿವೆ ಎಂದು ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ಅನಂತಮೂರ್ತಿ ಹೇಳಿದರು.
ನಗರದ ಕಲಾ ಮಂದಿರದಲ್ಲಿ ಮಾಂಡವ್ಯ ರಂಗಭೂಮಿ ಕಲಾವಿದರ ಸಂಘದಿಂದ ನಡೆದ “ÑÚM®Úãy% ÁÛÈÚáÛ¾Úßy’ ಪೌರಾಣಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿ ಜೀವನದ ಒಂದು ಭಾಗ. ಇವುಗಳು ಮನುಷ್ಯ ಉತ್ತಮ ರೀತಿಯಲ್ಲಿ ಮುನ್ನಡೆಯಲು ಸಹಕಾರಿಯಾಗಿವೆ ಎಂದರು.
ಕಲೆ, ಸಂಸ್ಕೃತಿ ಮಾನವನ ಬದುಕಿನ ಹಾಸು ಹೊಕ್ಕಾಗಿವೆ. ಲೌಕಿಕ ಬದುಕಿನ ಜೊತೆಗೆ ಆಧ್ಯಾತ್ಮಿಕ ಕಡೆಯೂ ಗಮನಹರಿಸಬೇಕು. ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿ, ಇಂಟರ್ನೆಟ್, ಮೊಬೈಲ್ ಹಾವಳಿಯ ನಡುವೆಯು ನಾಟಕ ಪ್ರದರ್ಶನ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಡಾ.ನಿತ್ಯಾನಂದ, ಸುಜಾತ, ಡಾ.ಉತ್ತಮ್ಚಂದ್, ಡಾ. ಜಿ.ಪಿ. ಶಿವಶಂಕರ್, ಡಾ.ಬಿ.ಎಲ್. ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯ ಹೊಸಹಳ್ಳಿ ಬೋರೇಗೌಡ, ಚಂದ್ರಕಲಾ, ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಅಪ್ಪಾಜಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಅಪ್ಪಾಜಿ, ಬಿಜೆಪಿ ಮುಖಂಡ ಕಾಡೇನಹಳ್ಳಿ ನಾಗಣ್ಣಗೌಡ, ಕೆಜೆಪಿ ಮುಖಂಡರಾದ ಪ್ರೇಮಾ ಯುವರಾಜ್, ಡಾ.ಉಮೇಶ್, ನಾಟಕ ನಿರ್ದೇಶಕ ಎಚ್.ಎನ್.ರಾಮಲಿಂಗಯ್ಯ ಇದ್ದರು.