ಕ.ಪ್ರ.ವಾರ್ತೆ ್ಣ ಪಾಂಡವಪುರ ್ಣ ಮಾ.30
ರೈತ ನಾಯಕ ಪುಟ್ಟಣ್ಣಯ್ಯ ವೈಯಕ್ತಿಕ ಚರ್ಚೆ ಬಿಟ್ಟು ವಿಷಯಾಧಾರಿತ ಬಹಿರಂಗ ಚರ್ಚೆಗೆ ಬರಲಿ ಅದಕ್ಕೆ ಉತ್ತರ ನೀಡುತ್ತೇವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸವಾಲು ಹಾಕಿದ್ದಾರೆ.
ತಾಲೂಕಿನ ದೇವೇಗೌಡಕೊಪ್ಪಲು ಗ್ರಾಮಸ್ಥರು ಏರ್ಪಡಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಅಭಿನಂದನೆ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಹೆಸರು ಹೇಳಿಕೊಂಡು ಚಳವಳಿ ರೂಪದಲ್ಲಿ ರಾಜಕೀಯ ಮಾಡುತ್ತಿರುವ ರೈತ ನಾಯಕ ಪುಟ್ಟಣ್ಣಯ್ಯ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮಾತನಾಡಿಕೊಂಡು ಕಾಲಹರಣ ಮಾಡುತ್ತಿರುವ ಇವರಿಂದ ಜೆಡಿಎಸ್ ಪಾಠ ಕಲಿಯಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಿ.ಎಸ್. ಪುಟ್ಟರಾಜು ಅವರು ಶಾಸಕರಾದ ಮೇಲೆ ಸಮಗ್ರ ಅಭಿವೃದ್ಧಿ ಕೆಲಸ ಮಾಡಿ ರಾಜ್ಯದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅದರೆ ಈ ಹಿಂದಿನ ಶಾಸಕರು ಏಕೆ ಮಾಡಲಿಲ್ಲ. ಬಯಲು ರಂಗಮಂಟಪ ,ಕುಂತಿ ಬೆಟ್ಟದಕ್ಕೆ ಜೀವ ಕಳೆ ತುಂಬಿದ ಕೀರ್ತಿ ಶಾಸಕ ಪುಟ್ಟರಾಜುಗೆ ಸಲ್ಲುತ್ತದೆ ಎಂದು ಪ್ರತಿಪಾದಿಸಿದರು.
ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ದೂರ ದೃಷ್ಟಿಯಿಂದ ಕ್ಷೇತ್ರದ ಅಭಿವೃದ್ಧಿ ಪಡಿಸಿದ ಶಾಸಕರನ್ನು ಗ್ರಾಮಸ್ಥರು ಸೇರಿ ಅಭಿನಂದಿಸಿರುವುದು ಸಾರ್ಥಕವಾಗಿದೆ ಎಂದು ನುಡಿದರು. ರೈತ ನಾಯಕ ಪುಟ್ಟಣ್ಣಯ್ಯ ಜೆಡಿಎಸ್ ಕಾರ್ಯಕರ್ತರ ಮೇಲೆ ಅಕ್ರಮ ಮಧ್ಯ ಸಂಗ್ರಹಣೆ ಸುಳ್ಳು ಅರೋಪ ಮಾಡುವ ಮೂಲಕ ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಿ.ಎಸ್.ಎಸ್. ಕೆ. ಕಾರ್ಖಾನೆ ಅವನತಿಗೆ ಪುಟ್ಟಣ್ಣಯ್ಯ ಮತ್ತು ನಾಗರಾಜಪ್ಪ ಅವರೇ ನೇರ ಹೊಣೆಗಾರರು ಈಗಾಗಲೇ ಕಾರ್ಖಾನೆ ಮೇಲೆ ರು. 150 ಕೋಟಿ ಸಾಲದ ಹೊರೆಯಿಂದ ಕಾರ್ಖಾನೆ ದುಸ್ಥಿತಿಗೆ ಬಂದಿದೆ ಇವರಿಂದ ಸಮಾಜಘಾತಕ ಕೆಲಸ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರೋಪಿಸಿದರು.
ಜೆಡಿಎಸ್ ಮುಖಂಡರಾದ ತಿಮ್ಮೇಗೌಡ, ಎಂ.ಬಿ.ಶ್ರೀನಿವಾಸ್, ತಾಪಂ ಸದಸ್ಯೆಯರಾದ ಶೈಲಜಾ ಗೋವಿಂದರಾಜು, ಲಕ್ಷ್ಮಿಪಾರ್ಥಸಾರಥಿ, ಕಾಡೇನಹಳ್ಳಿ ರಾಮಚಂದ್ರು ಹಿರೇಮರಳಿ ಚನ್ನೇಗೌಡ, ಅನೇಕ ಮುಖಂಡರು ಭಾಗವಹಿಸಿದ್ದರು.