ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ

Updated on: 

ಮಂಡ್ಯ: ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿಕ್ ಲಯನ್ ಸಂಸ್ಥೆ ಪೋಷಕ ಕೆ.ಟಿ. ಹನುಮಂತು, ಗ್ರಾಮೀಣ ಭಾಗದ ಮಕ್ಕಳು ಆರೋಗ್ಯಕ್ಕೆ ಒತ್ತು ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಕೊರತೆ ಇರುವುದರಿಂದ ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದರು. ಮಕ್ಕಳ ತಮಗೆ ತೊಂದರೆಗಳು ಇದ್ದರೆ ವೈದ್ಯರ ಮುಂದೆ ಯಾವುದೇ ಸಂಕೋಚ ಇಲ್ಲದೆ ಹೇಳಿಕೊಂಡು ಅವರ ಸಲಹೆ ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಬೇಕು. ಮಕ್ಕಳು ಕೇವಲ ಅಂಕಗಳಿಸುವುದಕ್ಕೆ ಸೀಮಿತರಾಗದೇ ಪಠ್ಯೇತರ ಚುಟುವಟಿಕೆಳಲ್ಲೂ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಒಬ್ಬ ವಿದ್ಯಾರ್ಥಿ ಉತ್ತಮ ಪ್ರಜೆಯಾಗಬೇಕಾದರೆ ಶಿಕ್ಷಕರ ಪಾತ್ರ ಅಪಾರವಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕಿ ನಾಗರತ್ನ, ನಾಟಿ ವೈದ್ಯ ರಮೇಶ್, ತತ್ವಪದ ಗಾಯಕರಾದ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚುಸಾಪ ಅಧ್ಯಕ್ಷ ಪೋತೇರ ಮಹದೇವು, ವಕೀಲ ಎಂ.ಗುರುಪ್ರಸಾದ್, ಗ್ರಾಪಂ ಅಧ್ಯಕ್ಷ ಸಿದ್ದರಾಮು, ಶಿಕ್ಷಕರಾದ ಕಾರುಣ್ಯ, ಶ್ರೀನಿವಾಸಮೂರ್ತಿ, ಡಾ.ಲಕ್ಷ್ಮಿ ಉಪಸ್ಥಿರತಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com