ಮದ್ದೂರು: ತಾಲೂಕು ಪಂಚಾಯ್ತಿ ಅಧ್ಯಕ್ಷ ಸಿ.ನಾಗೇಗೌಡ, ಉಪಾಧ್ಯಕ್ಷೆ ಗಂಗಾಬಲರಾಮ್ ಅಧಿಕಾರ ಸ್ವೀಕರಿಸಿದರು. ಪಟ್ಟಣದ ತಾಪಂ ಕ:ಕೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಒ ಸೋಣ್ಣೇಗೌಡ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಸಿ.ನಾಗೇಗೌಡ, ತಾಲೂಕಿನಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲಭೂತ ಸಮ್ಯಸೆಗಳು ಕಾಡುತ್ತಿವೆ. ಇಂತಹ ಸಮಸ್ಯೆಗಳ ಪರಿಹಾರ ಕುರಿತು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕೆ.ಪಿ.ಸಿ.ಸಿ.ಸದಸ್ಯ ಎಸ್.ಗುರುಚರಣ್, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾ.ಪಂ ಸದಸ್ಯರಾದ ರಾಮಚಂದ್ರ. ಸುನಂದ, ಕೆ.ಆರ್.ಮಹೇಶ್ಮ, ಶೋಭ, ರಾಜೀವ್, ಸುಜಾತ, ಗೀತ ಜಗದೀಶ್, ಇಂದ್ರಾಣಿ, ನೀಲಮ್ಮ, ರಾಜಣ್ಣ, ಪುರಸಭಾ ಸದಸ್ಯರಾದ ಸಿ.ಸಿ.ಮಹೇಶ್, ರಘು, ವಿಜಯಕುಮಾರ್ ಮುಖಂಡರು ಅಭಿನಂದಿಸಿದರು.